alex Certify SHOCKING NEWS: 5 ವರ್ಷದ ಬಾಲಕಿ ಮೇಲೆ ಬಾಲಕನ ಅಟ್ಟಹಾಸ; ಟೀಚರ್ ಮಗನಿಂದಲೇ ಹೇಯ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: 5 ವರ್ಷದ ಬಾಲಕಿ ಮೇಲೆ ಬಾಲಕನ ಅಟ್ಟಹಾಸ; ಟೀಚರ್ ಮಗನಿಂದಲೇ ಹೇಯ ಕೃತ್ಯ

ಲಖನೌ: 5 ವರ್ಷದ ಪುಟ್ಟ ಕಂದಮ್ಮನ ಮೇಲೆ 13 ವರ್ಷದ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ.

ಟ್ಯೂಷನ್ ಕ್ಲಾಸ್ ಗೆಂದು ಶಿಕ್ಷಕಿಯ ಮನೆಗೆ ತೆರಳಿದ್ದ ತನ್ನ ಸಹೋದರನ ಜೊತೆಗೆ ಬಾಲಕಿ ಕೂಡ ಹೋಗಿದ್ದಳು. ಈ ವೇಳೆ ಶಿಕ್ಷಕಿಯ 13 ವರ್ಷದ ಮಗ, ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

BREAKING NEWS: ನಟ ಶಾರೂಕ್​ ಕುಟುಂಬಕ್ಕೆ ಬಿಗ್​ ರಿಲೀಫ್​; ಪುತ್ರ ಆರ್ಯನ್ ಖಾನ್ ​ಗೆ ಕೊನೆಗೂ ಜಾಮೀನು ಮಂಜೂರು..!

ಬಾಲಕಿ ತನ್ನ ಸಹೋದರನೊಂದಿಗೆ ಶಿಕ್ಷಕಿ ಮನೆಗೆ ಬಂದಾಗ ಶಿಕ್ಷಕಿ ಮನೆಯಲ್ಲಿ ಇರಲಿಲ್ಲ. ಆಕೆಯ 13 ವರ್ಷದ ಮಗ ಮನೆಯಲ್ಲಿದ್ದ. ಕೆಲ ಸಮಯ ಕಾದರೂ ಶಿಕ್ಷಕಿ ಬಾರದಿದ್ದಾಗ ಬಾಲಕಿಯ ಸಹೋದರ ತಾನು ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾನೆ. ಈ ವೇಳೆ ಶಿಕ್ಷಕಿಯ ಮಗ ತಾನು ಹಾಗೂ ನಿನ್ನ ತಂಗಿ ಇಲ್ಲಿಯೇ ಆಟವಾಡುತ್ತಿರುವುದಾಗಿ ತಿಳಿಸಿದ್ದಾನೆ. ಹೀಗಾಗಿ ಬಾಲಕಿಯನ್ನು ಅಲ್ಲಿಯೇ ಬಿಟ್ಟು ಆಕೆಯ ಸಹೋದರ ಮನೆಗೆ ಬಂದಿದ್ದಾನೆ. ಬಾಲಕಿ ಸಹೋದರ ಮನೆಗೆ ತೆರಳುತ್ತಿದ್ದಂತೆಯೇ ಶಿಕ್ಷಕಿಯ ಮಗ 13 ವರ್ಷದ ದುರುಳ ಬಾಲಕಿ ಮೇಲೆ ಅಟ್ಟಹಾಸ ಮೆರೆದಿದ್ದು ಅತ್ಯಾಚಾರವೆಸಗಿದ್ದಾನೆ.

ಮನೆಗೆ ವಾಪಸ್ ಆದ ಸಂತ್ರಸ್ತ ಬಾಲಕಿ ತನ್ನ ತಾಯಿ ಬಳಿ ವಿಷಯ ಹೇಳಿದ್ದು, ಹೊಟ್ಟೆನೋವೆಂದು ಕಣ್ಣೀರಿಟ್ಟಿದ್ದಾಳೆ. ಬಾಲಕಿ ಸ್ಥಿತಿ ಕಂಡು ವಿಚಾರಿಸಿದ ತಾಯಿ ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, 13 ವರ್ಷದ ಬಾಲಾರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಬಾಲಾರೋಪಿಯನ್ನು ನೋಯ್ಡಾದ ಬಾಲಾಪರಾಧಿ ಕೇಂದ್ರಕ್ಕೆ ರವಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...