alex Certify SHOCKING NEWS: ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಶರಣಾದ ಯುವಕ

ಮೈಸೂರು: ಜನ್ಮದಿನದಂದೇ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಮೈಸೂರಿನ ಎನ್.ಆರ್. ಮೊಹಲ್ಲಾದಲ್ಲಿ ನಡೆದಿದೆ.

ಕಾರ್ತಿಕ್ (30) ಆತ್ಮಹತ್ಯೆಗೆ ಶರಣಾದ ಯುವಕ. ತಂದೆ-ತಾಯಿ ಕಳೆದುಕೊಂಡಿದ್ದ ಯುವಕ ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಇದೀಗ ಮೂರನೇ ಬಾರಿ ತನ್ನ ಹುಟ್ಟುಹಬ್ಬದ ದಿನವೇ ಆತ್ಮಹತ್ಯೆಗೆ ಯತ್ನಿಸಿ ಸಾವಿಗೆ ಶರಣಾಗಿದ್ದಾನೆ.

ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ

ಮೆಡಿಕಲ್ ರೆಪ್ರೆಸಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಗೆ ಕೆಲ ವರ್ಷಗಳ ಹಿಂದೆ ತಾಯಿ ಸಾವನ್ನಪ್ಪಿದ್ದರು. ಇದರಿಂದ ನೊಂದ ಕಾರ್ತಿಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ನಂತರದ ದಿನಗಳಲ್ಲಿ ತಂದೆ ಶಿವಲಿಂಗಯ್ಯ ಸಾವನ್ನಪ್ಪಿದ್ದರು. ತಂದೆ ಸಾವಿನಿಂದ ಇನ್ನಷ್ಟು ಆಘಾತಕ್ಕೊಳಗಾದ ಕಾರ್ತಿಕ್ ಚಲಿಸುವ ರೈಲಿನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. ಆದರೆ ಸ್ನೇಹಿತರು ಆತನನ್ನು ರಕ್ಷಿಸಿದ್ದರು ಎನ್ನಲಾಗಿದೆ. ಇದೀಗ ತನ್ನ ಹುಟ್ಟುಹಬ್ಬದ ದಿನವೇ ವಿಷ ಸೇವಿಸಿ ಕಾರ್ತಿಕ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...