alex Certify SHOCKING NEWS: ಶವ ಸಂಸ್ಕಾರಕ್ಕೆಂದು ಬಂದು ಅಪ್ರಾಪ್ತ ಬಾಲಕರ ಜತೆ ಪರಾರಿಯಾದ ಬಾಲಕಿಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ಶವ ಸಂಸ್ಕಾರಕ್ಕೆಂದು ಬಂದು ಅಪ್ರಾಪ್ತ ಬಾಲಕರ ಜತೆ ಪರಾರಿಯಾದ ಬಾಲಕಿಯರು

ತುಮಕೂರು: ಸಂಬಂಧಿಕರ ಮನೆಯ ಶವ ಸಂಸ್ಕಾರಕ್ಕೆಂದು ಪೋಷಕರ ಜೊತೆ ಆಗಮಿಸಿದ್ದ ಇಬ್ಬರು ಅಪ್ರಾಪ್ತ ಬಾಲಕಿಯರು ಅಪ್ರಾಪ್ತ ಬಾಲಕರೊಂದಿಗೆ ಪರಾರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ದೊಡ್ಡಸಾಗ್ಗೆರೆಯಲ್ಲಿ ನಡೆದಿದೆ.

ಶಿವಮೊಗ್ಗ ಮೂಲದ 16 ವರ್ಷದ ಬಾಲಕಿ ಹಾಗೂ 14 ವರ್ಷದ ಬಾಲಕಿ ಪೋಷಕರನ್ನು ಯಾಮಾರಿಸಿ ಶಿವಗಂಗೆ ಮೂಲದ ಸುಧಾಕರ್ ಹಾಗೂ ಬೆಂಗಳೂರಿನ ದಾಬಸ್ ಪೇಟೆಯ 17 ವರ್ಷದ ಅಪ್ರಾಪ್ತನ ಜತೆ ನಾಪತ್ತೆಯಾಗಿದ್ದಾರೆ.

ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಸ್ವೀಕರಿಸಿದ 10 ವರ್ಷದ ಬಾಲಕಿ..!

ಪ್ರಕರಣ ದಾಖಲಿಸಿಕೊಂಡಿರುವ ಕೋಳಾಲ ಪೊಲೀಸ್ ಠಾಣೆಯ ಪಿಎಸ್ಐ ಮಹಾಲಕ್ಷ್ಮಿ ನೇತೃತ್ವದ ತಂಡ ಚಿಕ್ಕಮಗಳೂರಿನಲ್ಲಿ ನಾಲ್ವರನ್ನು ಪತ್ತೆ ಮಾಡಿದೆ. ಚಿಕ್ಕಮಗಳೂರಿನ ಬೇಲೂರು ಬಳಿಯ ಕಾಫಿ ಎಸ್ಟೇಟ್ ನಲ್ಲಿ ನಾಲ್ವರು ವಾಸವಾಗಿರುವ ಬಗ್ಗೆ ತಿಳಿಯುತ್ತಿದ್ದಂತೆ ದಾಳಿ ನಡೆಸಿದ ಪೊಲೀಸರು ಇದೀಗ ಇಬ್ಬರು ಅಪ್ರಾಪ್ತ ಬಾಲಕಿಯರ ಜತೆ ಅಪ್ರಾಪ್ತ ಬಾಲಕರಿಬ್ಬರನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...