alex Certify Shocking News: ಪ್ರೇಯಸಿಯನ್ನೇ ಹತ್ಯೆಗೈದ ಯೋಗ ಟೀಚರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಪ್ರೇಯಸಿಯನ್ನೇ ಹತ್ಯೆಗೈದ ಯೋಗ ಟೀಚರ್

ಬೆಂಗಳೂರು: ಯೋಗ ತರಬೇತುದಾರನೊಬ್ಬ ತನ್ನ ಪ್ರೇಯಸಿಯನ್ನೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್ ನಲ್ಲಿ ನಡೆದಿದೆ.

ದಾಂಡೇಲಿ ಮೂಲದ ಶ್ಯಾಮ್ ಆರೋಪಿ ಯೋಗ ಶಿಕ್ಷಕ. ಉಡುಪಿ ಮೂಲದ 24 ವರ್ಷದ ಗಂಗಾ ಕೊಲೆಯಾದ ಯುವತಿ.

ಯೋಗ ಶಿಕ್ಷಕನಾಗಿ ಬೆಂಗಳೂರಿಗೆ ಬಂದಿದ್ದ ಶ್ಯಾಮ್ ಯಲಹಂಕ ನ್ಯೂ ಟೌನ್ ಬಳಿ ಯೋಗ ಟ್ರೇನಿಂಗ್ ಸೆಂಟರ್ ತೆರೆದಿದ್ದ. ಉಡುಪಿ ಮೂಲದ ಗಂಗಾ ಯೋಗ ತರಬೇತಿಗೆ ಯೋಗ ಕ್ಲಾಸ್ ಗೆ ಸೇರಿದ್ದಳು. ಯೋಗ ಶಿಕ್ಷಕ ಶ್ಯಾಮ್ ಹಾಗೂ ಗಂಗಾ ನಡುವೆ ಪ್ರೇಮಾಂಕುರವಾಗಿದೆ. ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಅತ್ಯಾಚಾರ ಘೋರ ಅಪರಾಧ, ಸಮರ್ಥನೀಯವಲ್ಲ: ರೇಪ್ ಹೇಳಿಕೆಗೆ ಪ್ರಿಯಾಂಕಾ ಗಾಂಧಿ ಖಂಡನೆ

ಯುವತಿ ಗಂಗಾ ತಾನೂ ಕೂಡ ಯೋಗ ಟ್ರೇನಿಂಗ್ ಕ್ಲಾಸ್ ತೆರೆಯುವುದಾಗಿ ಹೇಳಿ ಶ್ಯಾಮ್ ನಿಂದ 1 ಲಕ್ಷ ಹಣ ಪಡೆದು ಯೋಗ ಕ್ಲಾಸ್ ಆರಂಭಿಸಿದ್ದಾಳೆ. ಹಣದ ವಿಚಾರಕ್ಕೆ ಆರಂಭವಾದ ಮನಸ್ತಾಪ ಜಗಳ, ವಾಗ್ವಾದಕ್ಕೆ ತಿರುಗಿದೆ. ಕೋಪದ ಭರದಲ್ಲಿ ಶ್ಯಾಮ್, ಗಂಗಾಳ ತಲೆಯನ್ನು ಗೋಡೆಗೆ ಚಚ್ಚಿದ್ದಾನೆ. ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಆರೋಪಿ ಶ್ಯಾಮ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...