alex Certify SHOCKING NEWS: ನಿಲ್ಲದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಪುನೀತ್ ಹಿಂಬಾಲಿಸಿದ ಮತ್ತೋರ್ವ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING NEWS: ನಿಲ್ಲದ ಅಪ್ಪು ಅಭಿಮಾನಿಗಳ ಸಾವಿನ ಸರಣಿ; ಪುನೀತ್ ಹಿಂಬಾಲಿಸಿದ ಮತ್ತೋರ್ವ ಅಭಿಮಾನಿ

ತುಮಕೂರು: ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನ ಇಡೀ ಭಾರತೀಯ ಚಿತ್ರರಂಗಕ್ಕೆ, ಕೋಟ್ಯಂತರ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸಂದರ್ಭ. ಪುನೀತ್ ಇನ್ನಿಲ್ಲ ಎಂಬ ಆಘಾತದಿಂದ ಹೊರಬರಲಾಗದೇ ಹಲವು ಅಭಿಮಾನಿಗಳು ಸಾವಿನತ್ತ ಮುಖಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಹೃದಯಾಘಾತದಿಂದ ನಿಧನರಾಗಿ 6 ದಿನಗಳು ಕಳೆದರೂ ಅಭಿಮಾನಿಗಳ ಸಾವಿನ ಸರಣಿ ಇನ್ನೂ ನಿಂತಿಲ್ಲ. ತುಮಕೂರಿನ ಹಿರೇಹಳ್ಳಿಯಲ್ಲಿ ಪುನೀತ್ ಅವರ ಮತ್ತೋರ್ವ ಅಭಿಮಾನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಅಪ್ಪು ಶ್ರೀನಿವಾಸ್ (32) ಹೃದಯಾಘಾತದಿಂದ ವಿಧಿವಶರಾದ ಅಭಿಮಾನಿ. ಎರಡು ದಿನಗಳ ಕಾಲ ಪುನೀತ್ ಅಂತಿಮ ದರ್ಶನ ಪಡೆದಿದ್ದ ಅಪ್ಪು ಶ್ರೀನಿವಾಸ್ ಬೆಂಗಳೂರಿನಿಂದ ತುಮಕೂರಿನ ತಮ್ಮ ಮನೆಗೆ ವಾಪಸ್ ಆಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...