alex Certify ದುಬಾರಿ ಕಾರು ಪುಡಿ ಮಾಡಲು ಮಾಲೀಕನಿಂದಲೇ ಟಿಪ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಬಾರಿ ಕಾರು ಪುಡಿ ಮಾಡಲು ಮಾಲೀಕನಿಂದಲೇ ಟಿಪ್

ದುಬಾರಿ ಪೋರ್ಷೆ ಕಾರನ್ನ ವ್ಯಕ್ತಿಯೊಬ್ಬ ರಾಡ್​​ನಿಂದ ಹಾಡಹಗಲೇ ಧ್ವಂಸ ಮಾಡಿದ್ದು ಇದನ್ನ ನೋಡಿದ ಜನತೆ ಶಾಕ್​ ಆಗಿದ್ದಾರೆ.

ರ್ಯಾನ್​ ಹ್ಯಾಂಬ್ರೂಕ್​ ಎಂಬವರು ಕೆಂಟ್​​ನ ರಸ್ತೆಯಲ್ಲಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಪೋರ್ಷೆ 911 ಕಾರನ್ನ ಧ್ವಂಸ ಮಾಡ್ತಿರೋದನ್ನ ಕಂಡು ಶಾಕ್​ ಆಗಿದ್ದಾರೆ. ಜೂನ್​ 25ರಂದು ನಡೆದ ಈ ಘಟನೆ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ನಾನು ಕೆಲಸ ಮುಗಿಸಿ ಕಚೇರಿಯಿಂದ ವಾಪಸ್ಸಾಗುತ್ತಿದ್ದೆ . ಈ ವೇಳೆ ವ್ಯಕ್ತಿಯೊಬ್ಬ ಪೋರ್ಷೆ ಕಾರನ್ನ ಧ್ಚಂಸಗೊಳಿಸುತ್ತಿದ್ದ. ಆತ ಈ ಕಾರಿನ ಮಾಲೀಕನಲ್ಲ ಅನ್ನೋದಂತೂ ನನಗೆ ಸ್ಪಷ್ಟವಾಗಿತ್ತು. ಹೀಗಾಗಿ ನಾನು ಈ ದೃಶ್ಯವನ್ನ ಮೊಬೈಲ್​ನಲ್ಲಿ ಚಿತ್ರೀಕರಿಸಿದೆ ಎಂದು ರ್ಯಾನ್​ ಹೇಳಿದ್ದಾರೆ.

ಮತ್ತಿನಲ್ಲಿ ಪಾರ್ಟಿಗೆ ಕರೆದ ನಟಿಯನ್ನು ಅನುಚಿತವಾಗಿ ಸ್ಪರ್ಶಿಸಿದ ನಟ ಅರೆಸ್ಟ್

ಈ ವಿಡಿಯೋದಲ್ಲಿ ಪೋರ್ಷೆ ಕಾರಿನ ಸಮೀಪ ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಕೂಡ ನಿಂತಿದ್ದಾರೆ. ಇದರಲ್ಲಿ ಯುವಕ ಬರೋಬ್ಬರಿ 8.21 ಕೋಟಿ ರೂಪಾಯಿ ಮೌಲ್ಯದ ಕಾರನ್ನ ಧ್ವಂಸಗೊಳಿಸುತ್ತಿದ್ದರೆ ಅಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿ ಅದನ್ನ ಹೇಗೆ ಧ್ವಂಸ ಮಾಡಬೇಕು ಎಂದು ಹೇಳಿಕೊಡ್ತಿದ್ದ. ಸಂಪೂರ್ಣ ಧ್ವಂಸಗೊಂಡ ಕಾರನ್ನ ರಸ್ತೆ ಬದಿಯಲ್ಲೇ ಬಿಡಲಾಗಿದೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಕೆಂಟ್​ ಪೊಲೀಸ್​ ವಕ್ತಾರ, ಫೋಲ್ಕ್​ಸ್ಟೋನ್​ ರಸ್ತೆಯಲ್ಲಿ ಶುಕ್ರವಾರ ಸಂಜೆ 6:10ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಈ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿದ ವೇಳೆ ಕಾರನ್ನು ಧ್ವಂಸ ಮಾಡಲು ಅದರ ಮಾಲೀಕರೇ ಅನುಮತಿ ನೀಡಿದ್ದರು ಎಂದು ತಿಳಿದುಬಂದಿದೆ. ಹೀಗಾಗಿ ಈ ಘಟನೆ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದ್ರು.

Fuck ?? Folkestone road

Posted by Ryan Hambrook New on Friday, June 25, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...