alex Certify ಮತ್ತಿನಲ್ಲಿ ಪಾರ್ಟಿಗೆ ಕರೆದ ನಟಿಯನ್ನು ಅನುಚಿತವಾಗಿ ಸ್ಪರ್ಶಿಸಿದ ನಟ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತಿನಲ್ಲಿ ಪಾರ್ಟಿಗೆ ಕರೆದ ನಟಿಯನ್ನು ಅನುಚಿತವಾಗಿ ಸ್ಪರ್ಶಿಸಿದ ನಟ ಅರೆಸ್ಟ್

ಮುಂಬೈ: ಪಾರ್ಟಿಗೆ ಕರೆದ ನಟಿಯ ಮನೆಗೆ ಹೋಗಿದ್ದ ಜನಪ್ರಿಯ ನಟನೊಬ್ಬ ಮೈಮುಟ್ಟಿ ಅನುಚಿತವಾಗಿ ಸ್ಪರ್ಶಿಸಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.

‘ಕಸೌತಿ ಜಿಂದಗಿ ಕೇ’ ಖ್ಯಾತಿಯ ಕಿರುತೆರೆ ನಟ ಪ್ರಾಚೀನ್ ಚೌಹಾಣ್ ಬಂಧಿತ ಆರೋಪಿ. 22 ವರ್ಷದ ನಟಿ ಪಾರ್ಟಿಯಲ್ಲಿ ಪಾಲ್ಗೊಳ್ಳುವಂತೆ ಮನೆಗೆ ಆಹ್ವಾನಿಸಿದ್ದಳು. ಆಕೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮುಂಬೈ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪ್ರಾಚೀನ್ ಚೌಹಾಣ್ ಅವರನ್ನು ಬೋರಿವಾಲಿ ಕೋರ್ಟ್ ಗೆ ಹಾಜರುಪಡಿಸಲಾಗಿದ್ದು, ಕೋರ್ಟ್ ನಿಂದ ಜಾಮೀನು ದೊರೆತಿದೆ. ಜೂನ್ 30 ರಂದು ಗುರುವಾರ ರಾತ್ರಿ ಮಲಾಡ್ ಪೂರ್ವ ನಿವಾಸದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ನಟಿ ಪಾರ್ಟಿಗೆ ಆಹ್ವಾನಿಸಿದ್ದು, ಮದ್ಯ ಸೇವಿಸಿದ ಬಳಿಕ ಪ್ರಾಚೀನ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿದೆ.

ಮರುದಿನ ಮುಂಬೈನ ಕರೂರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾರ್ಟಿಯಲ್ಲಿ ಮದ್ಯ ಸೇವಿಸಿ ಅನುಚಿತವಾಗಿ ವರ್ತಿಸಿದ ಸ್ಪರ್ಶಿಸಿದ್ದ ಬಗ್ಗೆ ದೂರು ದಾಖಲಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಚೌತಾನ್ ಏಕ್ತಾ ಕಪೂರ್ ಅವರ ‘ಕಸೌತಿ ಜಿಂದಗಿ ಕೇ’ ಮೂಲಕ ಖ್ಯಾತಿಯನ್ನು ಗಳಿಸಿದ ಪ್ರಾಚೀನ್ “ಸಾತ್ ಫಾರೆ: ಸಲೋನಿ ಕಾ ಸಫರ್’, ‘ಶ್… ಕೊಯಿ ಹೈ’, ‘ಟ್ವಿಂಕಲ್ ಬ್ಯೂಟಿ ಪಾರ್ಲರ್ ಲಜಪತ್ ನಗರ’ ಮತ್ತು ‘ಮಾತ್ ಪಿತಾ ಕೆ ಚಟ್ರೊನ್ ಮೇ ಸ್ವರ್ಗ್’ ಸೇರಿದಂತೆ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...