alex Certify SHOCKING: ಮೂರು ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಪೈಶಾಚಿಕ ಕೃತ್ಯ; ರಕ್ತಸ್ರಾವದಿಂದ ಪ್ರಾಣ ಬಿಟ್ಟ ಕಂದಮ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮೂರು ವರ್ಷದ ಮಗುವಿನ ಮೇಲೆ ದೊಡ್ಡಪ್ಪನಿಂದಲೇ ಪೈಶಾಚಿಕ ಕೃತ್ಯ; ರಕ್ತಸ್ರಾವದಿಂದ ಪ್ರಾಣ ಬಿಟ್ಟ ಕಂದಮ್ಮ

ಬೆಂಗಳೂರು: ಪುಟ್ಟ ಕಂದಮ್ಮನ ಮೇಲೆ ದೊಡ್ಡಪ್ಪನೇ ಅತ್ಯಾಚಾರವೆಸಗಿರುವ ಘೋರ ಘಟನೆ ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ನಡೆದಿದೆ.

ಮೂರು ವರ್ಷದ ಮಗುವಿನ ಮೇಲೆ ಕಾಮುಕ ದೊಡ್ಡಪ್ಪ ಅತ್ಯಾಚಾರವೆಸಗಿದ್ದಾನೆ. ರಕ್ತಸ್ರಾವದಿಂದ ನರಳಿ ಮಗು ಸಾವನ್ನಪ್ಪಿದೆ. ಮಗು ಮೃತಪಡುತ್ತಿದ್ದಂತೆ ಪಾಪಿ ಆರೋಪಿ, ಅಪಘಾತದಿಂದ ಮಗು ಸಾವನ್ನಪ್ಪಿರುವುದಾಗಿ ಬಿಂಬಿಸಲು ಹೊರಟಿದ್ದಾನೆ.

ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲಾಗಿದೆ. ಮಗುವಿನ ದೊಡ್ಡಪ್ಪನೇ ನೀಚ ಕೃತ್ಯವೆಸಗಿರುವುದು ದೃಢಪಟ್ಟಿದೆ. ಆರೋಪಿಯನ್ನು ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...