alex Certify ಗುಂಡುಹಾರಿಸಿ ನಟ ಶಿವರಂಜನ್ ಹತ್ಯೆಗೆ ಯತ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡುಹಾರಿಸಿ ನಟ ಶಿವರಂಜನ್ ಹತ್ಯೆಗೆ ಯತ್ನ

ಬೆಳಗಾವಿ: ಚಿತ್ರನಟ ಹಾಗೂ ಸಮಾಜಸೇವಕ ಶಿವರಂಜನ್ ಬೋಳಣ್ಣನವರ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲದ ಮಾರುತಿ ದೇವಾಲಯದ ಬಳಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಶಿವರಂಜನ್ ಗುಂಡೇಟಿನಿಂದ ಪಾರಾಗಿದ್ದಾರೆ. ಆಸ್ತಿ ವಿಚಾರವಾಗಿ ಘಟನೆ ನಡೆದಿರಬಹುದು ಎಂದು ಹೇಳಲಾಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ‘ಆಟ ಹುಡುಗಾಟ’ ಮತ್ತು ನಟಿ ಶ್ರುತಿ ಅವರೊಂದಿಗೆ ‘ಅಮೃತ ಸಿಂಧು’ ಚಿತ್ರದಲ್ಲಿ ಶಿವರಂಜನ್ ಅಭಿನಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...