alex Certify GOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಸಂಜೆ ವೇಳೆಯೂ ವಿಮಾನ ಹಾರಾಟ; ನವೆಂಬರ್ ನಿಂದ ತಿರುಪತಿ ಸೇರಿದಂತೆ ಈ ನಗರಗಳಿಗೂ ವಿಮಾನ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

GOOD NEWS: ಶಿವಮೊಗ್ಗ ಏರ್ ಪೋರ್ಟ್ ನಿಂದ ಸಂಜೆ ವೇಳೆಯೂ ವಿಮಾನ ಹಾರಾಟ; ನವೆಂಬರ್ ನಿಂದ ತಿರುಪತಿ ಸೇರಿದಂತೆ ಈ ನಗರಗಳಿಗೂ ವಿಮಾನ ಸೌಲಭ್ಯ

ಶಿವಮೊಗ್ಗ: ಶಿವಮೊಗ್ಗ ಏರ್ ಪೋರ್ಟ್ ನಿಂದ ನವೆಂಬರ್ ನಿಂದ ಸಂಜೆ ವೇಳೆಯಲ್ಲಿಯೂ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ ವಿಮಾನ ನಿಲ್ದಾನಕ್ಕೆ ಸಧ್ಯ ಇಂಡಿಗೋ ವಿಮಾನ ಸೇವೆ ಸೌಲಭ್ಯವಿದೆ. ಇದರ ಜೊತೆಗೆ ನವೆಂಬರ್ ನಿಂದ ಸ್ಟಾರ್ ಏರ್ ವಿಮಾನ ಕೂಡ ತನ್ನ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಸಂಜೆ ವೇಳೆಯೂ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ನವೆಂಬರ್ 17ರಿಂದ ಸ್ಟಾರ್ ಏರ್ ವಿಮಾನ ಹಾರಾಟ ಆರಂಭವಾಗಲಿದ್ದು, ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದರಾಬಾದ್, ಚೆನ್ನೈ ನಡುವೆ ಸೇವೆ ಆರಂಭಿಸಲಿದೆ. ಈಗಾಗಲೇ ಸ್ಟಾರ್ ಏರ್ ಶಿವಮೊಗ್ಗದಿಂದ ಕಾರ್ಯಾಚರಣೆ ನಡೆಸಲು ಎಲ್ಲಾ ಸಿದ್ಧತೆ ನಡೆಸಿದ್ದು, ಟಿಕೆಟ್ ಬುಕ್ಕಿಂಗ್ ಕೂಡ ಆರಂಭವಾಗಿದೆ ಎಂದು ತಿಳಿಸಿದರು.

ಏರ್ ಪೋರ್ಟ್ ನಿರ್ವಹಣೆಗೆ ತುಂಬಾ ಖರ್ಚು ಬರುತ್ತಿದೆ. ಖರ್ಚು ಸರಿದೂಗಿಸಲು ಸ್ಥಳೀಯವಾಗಿ ಬಂಡವಾಳ ಯೋಜನೆ ಚಿಂತನೆ ನಡೆದಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...