alex Certify BIG NEWS: ಮತ್ತೊಂದು ಬಾಂಬ್ ಸಿಡಿಸಿ ರಾಜ್ ಕುಂದ್ರಾ ರಹಸ್ಯ ಬಹಿರಂಗಪಡಿಸಿದ ಶೆರ್ಲಿನ್ ಚೋಪ್ರಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೊಂದು ಬಾಂಬ್ ಸಿಡಿಸಿ ರಾಜ್ ಕುಂದ್ರಾ ರಹಸ್ಯ ಬಹಿರಂಗಪಡಿಸಿದ ಶೆರ್ಲಿನ್ ಚೋಪ್ರಾ

ಮುಂಬೈ ಪೊಲೀಸರಿಂದ ಅಶ್ಲೀಲ ಸಿನಿಮಾ ಪ್ರಕರಣದಲ್ಲಿ ಬಂಧನಕ್ಕೊಳಗಾದ ಉದ್ಯಮಿ ರಾಜ್ ಕುಂದ್ರಾ ವಿರುದ್ಧ ನಟಿ ಶೆರ್ಲಿನ್ ಚೋಪ್ರಾ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಆಕೆ ಕುಂದ್ರಾ ಮೇಲೆ ಗಂಭೀರ ಆರೋಪ ಮಾಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೇ, ವಿರೋಧಿಸಿದರೂ ಆತ ತನ್ನನ್ನು ಚುಂಬಿಸಿದ್ದಾನೆ ಎಂದು ಹೇಳಿಕೊಂಡಿದ್ದಾಳೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯನ್ನು ಪೊಲೀಸರು ಸುಮಾರು 8 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದಾರೆ. ಇಂದು ಶೆರ್ಲಿನ್ ಅವರು ರಾಜ್ ಕುಂದ್ರಾ ಅವರೊಂದಿಗಿನ ಹಳೆಯ ಫೋಟೋ ಹಂಚಿಕೊಂಡಿದ್ದು, ಆತನ ಆಪ್‌ನಲ್ಲಿ ಹೇಗೆ ಕೆಲಸ ಮಾಡಲು ಪ್ರಾರಂಭಿಸಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಶೆರ್ಲಿನ್ ಚೋಪ್ರಾ ಹಿಂದಿಯಲ್ಲಿ ಟ್ವೀಟ್ ಮಾಡಿ, ಈ ದಿನ ಮಾರ್ಚ್ 29, 2019. ಆರ್ಮ್ಸ್‌ ಪ್ರೈಮ್ ಆಯೋಜಿಸಿದ ದಿ ಶೆರ್ಲಿನ್ ಚೋಪ್ರಾ ಆಪ್‌ ನ ಮೊದಲ ಕಂಟೆಂಟ್ ಶೂಟ್ ನಡೆಯುತ್ತಿತ್ತು. ಇದು ನನಗೆ ಹೊಸ ಅನುಭವವಾಗಿತ್ತು ಮೊದಲು ಯಾವುದೇ ಮಾಹಿತಿ ಇರಲಿಲ್ಲ. ಆಪ್‌ ಗೆ ಸಂಬಂಧಿಸಿದಂತೆ ಭರವಸೆ ಮತ್ತು ಉತ್ಸಾಹದ ವಾತಾವರಣವಿತ್ತು ಎಂದು ಹೇಳಿಕೊಂಡಿದ್ದಾರೆ.

ಶೆರ್ಲಿನ್ ಚೋಪ್ರಾ ತನ್ನ ಹೇಳಿಕೆಯನ್ನು ದಾಖಲಿಸಲು ಮುಂಬೈ ಅಪರಾಧ ವಿಭಾಗದ ಪ್ರಾಪರ್ಟಿ ಸೆಲ್ ಮುಂದೆ ಹಾಜರಾಗಿದ್ದಾಳೆ. 2019 ರ ಆರಂಭದಲ್ಲಿ ತಾನು ವಿರೋಧಿಸಿದರೂ ರಾಜ್ ಕುಂದ್ರಾ ಚುಂಬಿಸಲು ಆರಂಭಿಸಿದರು ಎಂದು ಆರೋಪಿಸಿ ವಿಷಯ ಬಹಿರಂಗಪಡಿಸಿದ್ದಾಳೆ. ಕುಂದ್ರಾ ಕಳಿಸಿದ್ದ ಸಂದೇಶದ ಅನುಸಾರ ಆ ಸ್ಥಳಕ್ಕೆ ತಾನು ತಲುಪಿದ್ದೆ ಎಂದು ತಿಳಿಸಿದ್ದಾಳೆ. ತಾನು ವಿವಾಹಿತನೊಂದಿಗೆ ಬೆರೆಯುವುದಿಲ್ಲ ಎಂದೂ ಆಕೆ ಹೇಳಿಕೊಂಡಿದ್ದಾಳೆ. ಅದಕ್ಕೆ ರಾಜ್ ಕುಂದ್ರಾ, ಪತ್ನಿ ಶಿಲ್ಪಾ ಶೆಟ್ಟಿಯೊಂದಿಗಿನ ಸಂಬಂಧ ಸರಿ ಇಲ್ಲ ಎಂದು ಹೇಳಿದ್ದರೆಂದು ಶೆರ್ಲಿನ್ ತಿಳಿಸಿದ್ದಾಳೆ. ಕಳೆದ ತಿಂಗಳು ಶೆರ್ಲಿನ್ ಚೋಪ್ರಾ ಸಲ್ಲಿಸಿದ್ದ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...