alex Certify ಮೊಬೈಲ್‌ ನಲ್ಲಿ ರೆಕಾರ್ಡ್‌ ಆಗಿತ್ತು ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಕೊನೆಯ ಮಾತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ನಲ್ಲಿ ರೆಕಾರ್ಡ್‌ ಆಗಿತ್ತು ಅತ್ಯಾಚಾರಕ್ಕೊಳಗಾಗಿದ್ದ ಯುವತಿಯ ಕೊನೆಯ ಮಾತು…!

ಕೆಲಸವೊಂದರ ಸಂದರ್ಶನ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಯುವತಿಯ ಮೇಲೆ ಉತ್ತರಪ್ರದೇಶದ ಬಿಜ್ನೋರ್‌ ರೈಲು ನಿಲ್ದಾಣ ಬಳಿ ಅತ್ಯಾಚಾರ ನಡೆದಿತ್ತು. ಅಷ್ಟೇ ಅಲ್ಲದೆ, ಸೆ.10 ರಂದು ಆಕೆಯ ಮೃತದೇಹ ಕೂಡ ಸಿಕ್ಕಿತ್ತು.

ಮಕ್ಕಳ ಮೇಲೆ ಅತ್ಯಾಚಾರವೆಸಗಿದ್ದ ಪಾಪಿಗೆ 600 ವರ್ಷ ಜೈಲು

ಮೃತ ಯುವತಿ ರಾಷ್ಟ್ರೀಯ ಮಟ್ಟದ ಖೋ ಖೋ ಆಟಗಾರ್ತಿ ಆಗಿದ್ದಳು. ಆಕೆಯ ಮೇಲೆ ನಡೆದ ಪೈಶಾಚಿಕ ಕೃತ್ಯದ ವೇಳೆ ಮೊಬೈಲ್‌ ‘ಆನ್‌’ ಆಗಿಯೇ ಇತ್ತು ಎಂಬ ಸಂಗತಿ ಈಗ ಬೆಳಕಿಗೆ ಬಂದಿದೆ.

ಆಕೆ ಸ್ನೇಹಿತೆಯೊಂದಿಗೆ ಮಾತನಾಡುತ್ತಿದ್ದಾಗಲೇ ಕಾಮುಕ, ಆಕೆಯನ್ನು ಅಪಹರಿಸಿ ದುಷ್ಕೃತ್ಯ ಎಸಗಿದ್ದ. ಎಲ್ಲವೂ ಮೊಬೈಲ್‌ನಲ್ಲಿ ಕೇಳಿಸಿಕೊಂಡ ಸ್ನೇಹಿತೆ ಭಾರಿ ಆಘಾತದಲ್ಲಿ ಮುಳುಗಿದ್ದಾಳೆ.

ಸಂತ್ರಸ್ತೆಯ ದುಪ್ಪಟ್ಟಾವನ್ನೇ ಬಾಯಿಗೆ ಕಟ್ಟಿ, ಹಗ್ಗವೊಂದರಲ್ಲಿ ಆಕೆಯ ಕೈಗಳನ್ನು ಕಾಮುಕ ಬಂಧಿಸಿದ್ದ. ಕೊನೆಯದಾಗಿ ಆಕೆ ಸಹಾಯಕ್ಕಾಗಿ ಅಂಗಲಾಚಿ ಕೂಗಿದ್ದನ್ನು ಮಾತ್ರ ಕೇಳಿದೆ. ನಂತರ ಮೂರ್ಛೆ ಹೋದಳು ಎಂದು ಸ್ನೇಹಿತೆಯು ಕರಾಳತೆಯನ್ನು ಪೊಲೀಸರಿಗೆ ಕಣ್ಣೀರಿಡುತ್ತಳೇ ವಿವರಿಸಿದ್ದಾಳೆ.

ಕಾಮುಕನೊಬ್ಬ ಮಾದಕ ವ್ಯಸನಿಯಾಗಿದ್ದು, ಆತನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಶಾಹಜಾದ್‌ ಅಲಿಯಾಸ್‌ ಹಾದಿಮ್‌ ಎಂದು ಗುರುತಿಸಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...