alex Certify ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ರಾಧಿಕಾ ಆಪ್ಟೆ ಬಳಿ ಇದೆ 3 ಐಷಾರಾಮಿ ಕಾರು…!

ರಾಧಿಕಾ ಆಪ್ಟೆ, 2005 ರಲ್ಲಿ “ವಾಹ್, ಲೈಫ್ ಹೊ ತೊ ಐಸಿ ” ಎಂಬ ಚಿತ್ರದ ಮೂಲಕ ಬಾಲಿವುಡ್ ‌ಗೆ ಪಾದಾರ್ಪಣೆ ಮಾಡಿದ ಈಕೆ ಬಾಲಿವುಡ್‌ನಲ್ಲಿ ಸಾಕಷ್ಟು ಸದ್ದು ಮಾಡಿದ್ದಾಳೆ. ಕೆಲವು ದಕ್ಷಿಣ ಭಾರತದ ಸಿನೆಮಾಗಳಲ್ಲಿ ಕೂಡ ನಟಿಸಿದ್ದಾಳೆ.

ಈಕೆ ಒಂದೇ ರೀತಿಯ ಸಿನೆಮಾಗೆ  ಸೀಮಿತವಾಗಿಲ್ಲ. ಆಕೆಯ ಎಲ್ಲ ಚಿತ್ರಗಳು ವೈವಿದ್ಯವಾಗಿದ್ದು,  ಈಕೆ ನಟಿಸಿದ ಪ್ಯಾಡ್ ಮ್ಯಾನ್, ಲಾಸ್ಟ್ ಸ್ಟೋರೀಸ್, ರಾತ್ ಅಕೇಲಿ ಹೈ, ಹೀಗೆ ಎಲ್ಲವು ಒಂದಕ್ಕಿಂತ ಒಂದು ವಿಭಿನ್ನವಾಗಿದೆ.

ಹಸುಗಳ ಮೇಲೆ ವಿಕೃತ ಲೈಂಗಿಕ ದೌರ್ಜನ್ಯ, ಹಿಂಸೆ: ರೈತರಿಂದ ಜಾನುವಾರು ಮಾರಾಟ

ರಾಧಿಕಾಳ ಸಿನೆಮಾಗಳು ಅಷ್ಟೇ ಅಲ್ಲ, ಆಕೆಯ ಕಾರುಗಳು ಕೂಡ ವೈವಿಧ್ಯ ರೀತಿಯಾಗಿದ್ದು, ಅನೇಕ ಸ್ಟೈಲಿಶ್ ಕಾರುಗಳ ಒಡತಿ ಈಕೆ. ಹುಟ್ಟುಹಬ್ಬ ಆಚರಿಸುತ್ತಿರುವ ರಾಧಿಕಾಳ ಬಳಿ ಇರುವ ದುಬಾರಿ ಕಾರುಗಳ ಪಟ್ಟಿ ಹೀಗಿದೆ:

ರಾಧಿಕಾಳ ಬಳಿ ಆಡಿ A4 ಇದ್ದು, ಇದರ ಬೆಲೆ 43.19 ಲಕ್ಷದಿಂದ 47.61 ಲಕ್ಷ, ಈಕೆಯ ಬಳಿ ಬಿ ಎಂ ಡಬ್ಲ್ಯೂ X5 ಕಾರು ಇದ್ದು, ಸುಮಾರು 76.47 ಲಕ್ಷ ರೂಪಾಯಿಗಳು. ಇದಲ್ಲದೆ ವೋಲ್ಸವಾಗನ್ ಟಿಗನ್ ಇದ್ದು, ಇದರ ಬೆಲೆ ಸುಮಾರು 30.87 ಲಕ್ಷ.

ರಾಧಿಕಾಳು ಜಾಕಿ ಶ್ರಾಫ್ ಮತ್ತು ವಿಜಯ್ ವರ್ಮಾ ಅವರೊಂದಿಗೆ ಓಕೆ ಕಂಪ್ಯೂಟರ್ ಎಂಬ ವೆಬ್ ಸಿರೀಸ್ ನಲ್ಲಿ ನಟಿಸಿದ್ದು, ಲಕ್ಷ್ಮಿ ಸೂರಿ ಪಾತ್ರವನ್ನು ಮಾಡಿದ್ದಾರೆ. ಸದ್ಯಕ್ಕೆ ಮೋನಿಕಾ ಮೈ ಡಾರ್ಲಿಂಗ್ ವೆಬ್ ಸಿರೀಸ್ಗಾಗಿ ನಟಿಸುತ್ತಿದ್ದಾರೆ. ಈಕೆ ಬ್ರಿಟಿಷ್ ಸಂಗೀತಗಾರ ಬೆಂಡಿಕ್ಟ್ ಟೈಲರ್ ಮದುವೆಯಾಗಿದ್ದಾರೆ. ಇವರಿಬ್ಬರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈಯಕ್ತಿಕ ಜೀವನವನ್ನು ಆಕೆ ತನ್ನ ಕೆಲಸದ ಮಧ್ಯೆ ಸೇರಿಸಲು ಇಷ್ಟಪಡುವುದಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...