alex Certify ಫೆಬ್ರವರಿಯಲ್ಲಿ ಈ ರಾಶಿಯವರನ್ನು ಕಾಡಲಿದ್ದಾನೆ ಶನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೆಬ್ರವರಿಯಲ್ಲಿ ಈ ರಾಶಿಯವರನ್ನು ಕಾಡಲಿದ್ದಾನೆ ಶನಿ

ಹೊಸ ವರ್ಷದ ಮೊದಲ ತಿಂಗಳು ಮುಗಿಯುತ್ತಿದೆ. ವರ್ಷದ ಎರಡನೇ ತಿಂಗಳು ಫೆಬ್ರವರಿ ಶುರುವಾಗ್ತಿದೆ. ಫೆಬ್ರವರಿ ತಿಂಗಳು ಕೆಲ ರಾಶಿಯವರಿಗೆ ಸಮಸ್ಯೆ ತರಲಿದೆ. ಶನಿ, ಕೆಲ ರಾಶಿಯವರ ಮೇಲೆ ನೇರವಾಗಿ ಪ್ರಭಾವ ಬೀರಲಿದ್ದಾನೆ. ಹಾಗಾಗಿ ಆ ರಾಶಿಯವರು ಫೆಬ್ರವರಿ ತಿಂಗಳಿನಲ್ಲಿ ಎಚ್ಚರಿಕೆಯಿಂದಿರುವುದು ಒಳ್ಳೆಯದು. ಶನಿ ಪ್ರಭಾವ ಬೀರುವ ರಾಶಿಗಳ ವಿವರ ಇಲ್ಲಿದೆ.

ಮಂಗಳನು ​​ಮೇಷ ರಾಶಿಯ ಅಧಿಪತಿಯಾಗಿದ್ದು. ಶನಿ ಮತ್ತು ಮಂಗಳನ ನಡುವೆ ದ್ವೇಷವಿದೆ. ಶನಿ, ಮುಂದಿನ 1 ತಿಂಗಳವರೆಗೆ ಈ ರಾಶಿಯವರಿಗೆ ತೊಂದರೆ ನೀಡಲಿದ್ದಾನೆ. ಒತ್ತಡ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ತಾಳ್ಮೆ ಅಗತ್ಯ.

ಕರ್ಕ ರಾಶಿಯವರಿಗೂ ಮುಂದಿನ ತಿಂಗಳು ಸ್ವಲ್ಪ ಕಷ್ಟಕರವಾಗಿರಲಿದೆ. ಆರೋಗ್ಯ ಹಾಗೂ ವೃತ್ತಿಯಲ್ಲಿ ಏರುಪೇರಾಗಲಿದೆ. ಉದ್ಯೋಗದಲ್ಲಿರುವವರು ಹೆಚ್ಚಿನ ಜಾಗೃತಿ ವಹಿಸಬೇಕು.

ಮಿಥುನ ರಾಶಿಯವರಿಗೂ ಫೆಬ್ರವರಿ ಕಠಿಣವಾಗಿರಲಿದೆ. ಸ್ವಲ್ಪ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ.

ಕನ್ಯಾ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ಕೆಲಸಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಶ್ರಮಕ್ಕೆ ತಕ್ಕ ಫಲ ಸಿಗದಿರಬಹುದು. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು.

ತುಲಾ ರಾಶಿಯವರ ಗೌರವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ.  ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಕೆಲಸ ಮುಗಿಸಲು ಕಷ್ಟಪಡಬೇಕಾಗುತ್ತದೆ. ಜೊತೆಗೆ ಕುಟುಂಬದಲ್ಲಿ ವಿರಸವುಂಟಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...