alex Certify ಯುರೋಪ್​​ನ ಗಲ್ಲಿಗಲ್ಲಿಯಲ್ಲಿ ಕೀಟಲೆ ಮಾಡ್ತಿದ್ದ ನಟ ಶಾಹಿದ್ ಕಪೂರ್: ಇಟಾಲಿಯನ್ ಮಹಿಳೆಗೆ ಸಾರಿ ಕೇಳಿದ್ದೇಕೆ ಗೊತ್ತಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯುರೋಪ್​​ನ ಗಲ್ಲಿಗಲ್ಲಿಯಲ್ಲಿ ಕೀಟಲೆ ಮಾಡ್ತಿದ್ದ ನಟ ಶಾಹಿದ್ ಕಪೂರ್: ಇಟಾಲಿಯನ್ ಮಹಿಳೆಗೆ ಸಾರಿ ಕೇಳಿದ್ದೇಕೆ ಗೊತ್ತಾ..?

ಬ್ಯುಸಿ ಲೈಫ್ನ್​ನಿಂದ ಕೊಂಚ ಬ್ರೇಕ್ ಸಿಕ್ಕರೆ ಸಾಕು, ಗೆಳೆಯರೊಂದಿಗೆ ಟ್ರಿಪ್ ಪ್ಲಾನ್ ಮಾಡಿ, ಮೋಜು ಮಸ್ತಿ ಮಾಡೊದೇನೇ ಒಂದು ಖುಷಿ. ಈಗ ಬಾಲಿವುಡ್​ನ ನಟ ಶಾಹಿದ್ ಕಪೂರ್ ಕೂಡಾ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ತಮ್ಮ ಸಹೋದರ ಈಶಾನ್ ಖಟ್ಟರ್ ಹಾಗೂ ಗೆಳೆಯ ನಟ ಕುನಾಲ್ ಖೆಮೂ ಜೊತೆಗೆ ಯುರೋಪ್ ಸುತ್ತಾತ್ತಿದ್ದಾರೆ. ಅದು ಕೂಡಾ ಬೈಕ್​ನಲ್ಲಿ.

ಕಳೆದ ಕೆಲವು ದಿನಗಳಿಂದ ಬಾಲಿವುಡ್ ನಟರಾದ ಶಾಹಿದ್ ಕಪೂರ್, ಈಶಾನ್ ಖಟ್ಟರ್ ಹಾಗೂ ಕುನಾಲ್ ಖೆಮೂ, ಮೂವರೂ ಯುರೋಪ್​​ನ ಗಲ್ಲಿ ಗಲ್ಲಿಗಳನ್ನ ಬೈಕ್​ನಲ್ಲಿ ಸುತ್ತು ಹಾಕ್ತಿದ್ದಾರೆ. ಅವರು ಎಂಜಾಯ್ ಮಾಡಿದ್ದ ಒಂದೊಂದು ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಅದೇ ಯುರೋಪಿಯನ್ ಟೂರ್​ನ ವಿಡಿಯೋ ಒಂದು ಸಖತ್ ಫನ್ನಿಯಾಗಿದೆ. ಕುನಾಲ್​ ಖೆಮೂ, ಶಾಹಿದ್ ಕಪೂರ್ ಹಾಗೂ ಈಶಾನ್ ಖಟ್ಟರ್ ಮೂವರೂ ಯುರೋಪ್​ನ ಒಂದು ಇಕ್ಕಟ್ಟಾದ ಗಲ್ಲಿಯಲ್ಲಿ ಗೋಡೆಯೊಂದನ್ನ ಹತ್ತಿ, ಫೋಟೋಗೆ ಫನ್ನಿಯಾಗಿ ಪೋಸ್ ಕೊಡ್ತಾ ಇದ್ದರು. ಈಶಾನ್ ಖಟ್ಟರ್ ಹಾಗೂ ಶಾಹಿದ್ ಕಪೂರ್ ಏನೋ, ಹಾಗೋ ಹೀಗೋ ಕಸರತ್ತು ಮಾಡ್ಕೊಂಡು ಪೋಸ್​ಗೆ ರೆಡಿಯಾದ್ರು.

ಆದರೆ ಕುನಾಲ್ ಖೇಮೂ ಗೋಡೆ ಏರಿ ಪೋಸ್ ಕೊಡೊಕೆ ಪ್ರಯತ್ನ ಪಟ್ಟರೂ ಸಾಧ್ಯವಾಗದೇ ಜಾರಿದರು. ಆಗ ಶಾಹಿದ್ ಕುನಾಲ್​ಗೆ ರೇಗಿಸೋಕೆ ಜೋರಾಗಿ ನಕ್ಕಿದ್ದಾರೆ. ಆ ಸದ್ದಿಗೆ ಅಲ್ಲೇ ಪಕ್ಕದ ಆಂಟಿ ಕಿಟಕಿ ಬಾಗಿಲು ತೆಗೆದು ನೋಡಿದ್ದಾರೆ. ಅವರ ಕಣ್ಣಿಗೆ ಕಾಣಿಸಿದ್ದು ಶಾಹಿದ್​​ ಕಪೂರ್​.

ತಮ್ಮ ಕೀಟಲೆಯಿಂದ ಅವರಿಗೆ ತೊಂದರೆಯಾಗುತ್ತಿದೆ ಅಂತ ಗೊತ್ತಾದ ತಕ್ಷಣ ಶಾಹಿದ್ ಸಾರಿ ಅಂಟಿ ಅಂತ ಕೇಳಿದ್ದಾರೆ. ಹಾಗಂತ ಪೋಸ್ ಕೊಟ್ಟು ಫೋಟೋ ತೆಗೆಸಿಕೊಳ್ಳೊದು ಮಾತ್ರ ಮರೆಯಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...