alex Certify ಇದು ವಿಶ್ವದ ಕಾಸ್ಟ್ಲಿಯೆಸ್ಟ್ ಪನ್ನೀರು…! ಒಂದು ಕೆ.ಜಿ. ಗೆ ಜಸ್ಟ್ 82,000 ರೂಪಾಯಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ವಿಶ್ವದ ಕಾಸ್ಟ್ಲಿಯೆಸ್ಟ್ ಪನ್ನೀರು…! ಒಂದು ಕೆ.ಜಿ. ಗೆ ಜಸ್ಟ್ 82,000 ರೂಪಾಯಿ

ಚಿಕನ್….. ಮಟನ್…… ಫಿಶ್…… ಇದು ಮಾಂಸಹಾರಿಗಳ ಫೇವರೇಟ್. ಇನ್ನು ಸಸ್ಯಹಾರಿಗಳಿಗೆ ಸೊಪ್ಪು, ತರಕಾರಿ ಇವೇ ಎಲ್ಲ ಆಗಿರುತ್ತೆ. ಇದರ ಜೊತೆಗೆ ಆಗಾಗ ಪನ್ನೀರ್ ಇದ್ದರೆ ಸೂಪರ್ ಅಂತಾರೆ ಶುದ್ಧ ಸಸ್ಯಹಾರಿಗಳು. ಏನಾದ್ರೂ ವಿಶೇಷ ಐಟಂ ರೆಡಿ ಮಾಡ್ತಿದ್ದಾರೆ ಅಂದ್ರೆ ಅದರಲ್ಲಿ ಒಂದಲ್ಲ ಒಂದು ಐಟಂ ಪನ್ನೀರ್ ಇದ್ದರೆ ಸಾಕು ಅಂತ ಅಂದ್ಕೊಳ್ಳೊರು ತುಂಬಾ ಜನ. ಇತ್ತೀಚೆಗೆ ಮಾರ್ಕೆಟ್‌ನಲ್ಲಿ ಪನ್ನೀರ್‌ಗೆ ತುಂಬಾ ಬೇಡಿಕೆ ಇದೆ.

ಕೆಲವರು ಮನೆಯಲ್ಲೇ ಪನ್ನೀರ್‌ ತಯಾರಿಸಿಕೊಳ್ತಾರೆ. ಇನ್ನು ಕೆಲವರು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ಪನ್ನೀರ್‌ ಖರೀದಿ ಮಾಡುತ್ತಾರೆ. ಕ್ವಾಲಿಟಿ ಹಾಗೂ ಕಂಪನಿಗಳ ಆಧಾರದ ಮೇಲೆ ಪನ್ನೀರಿನ ಬೆಲೆ ನಿರ್ಧಾರವಾಗಿರುತ್ತೆ. ಆದರೆ ಇಲ್ಲಿ ವಿಶೇಷ ಬಗೆಯ ಪನ್ನೀರ್ ಇದೆ, ಇದರ ಬೆಲೆ ಕೇಳ್ತಿದ್ರೇನೆ ಸುಸ್ತಾಗಿ ಬಿಡುವ ಹಾಗಿದೆ. ಇದು ಚಿನ್ನಕ್ಕಿಂತಲೂ ಕಾಸ್ಟ್ಲಿ. ಅಷ್ಟಕ್ಕೂ ಈ ಕಾಸ್ಟ್ಲಿ ಪನ್ನೀರ್ ಸ್ಪೆಷಾಲಿಟಿ ಏನು..? ಇದು ಎಲ್ಲಿ ಸಿಗುತ್ತೆ ಗೊತ್ತಾ..?

ಈ ಸ್ಪೆಷಲ್ ಪನ್ನೀರ್ ಸಿಗೋದು ಯುರೋಪ್‌ನಲ್ಲಿ. ಈ ಪನ್ನಿರ್ ಬೆಲೆ ಕೆ.ಜಿ. ಗೆ ಏನಿಲ್ಲ ಅಂದರೂ 800 ರಿಂದ 1000 ಯುರೋ. ಅಂದರೆ ನಮ್ಮ ಇಂಡಿಯನ್ ರೂಪಾಯಿಯಲ್ಲಿ ಹೇಳುವುದಾರೆ ಜಸ್ಟ್‌ 82,000 ರಿಂದ 85,000 ಸಾವಿರ ರೂಪಾಯಿ. ಈ ಪನ್ನೀರ್ ಬೆಲೆ ಕೇಳಿ ನೀವು ಶಾಕ್ ಆದ್ರಾ..!

ಈ ವಿಶ್ವದ ದುಬಾರಿ ಪನ್ನೀರ್‌ನ್ನ ಯುರೋಪಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಕತ್ತೆಯ ಹಾಲಿನಿಂದ ವಿಶೇಷವಾಗಿ ತಯಾರಿಸಲಾಗಿರುವ ಪನ್ನೀರ್ ಆಗಿದೆ. ಇದನ್ನು ಪುಲೆ ಅನ್ನೋ ತಳಿಯ ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತೆ. ಒಂದು ಕಿಲೋಗ್ರಾಮ್ ಪನ್ನೀರ್ ತಯಾರಿಸಲು ಸುಮಾರು 25 ಲೀಟರ್ ಕತ್ತೆಯ ಹಾಲು ಬೇಕಾಗುತ್ತೆ. ಇದೇ ಕಾರಣಕ್ಕೆ ಈ ಪನ್ನೀರ್‌‌ ಬೆಲೆ ಇಷ್ಟು ದುಬಾರಿಯಾಗಿದೆ.‌

A man inspects the luxury cheese in the village of Kukujevci near the farm in Zasavica Resort. (Photo credit: Reuters)

A woman milks a donkey in Zasavica to produce the cheese. (Photo credit: Reuters)
A woman pours the fresh donkey milk at the reserve in Serbia. (Photo credit: Reuters)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...