alex Certify ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಿಂಚಣಿ, ಕಾನೂನು ಸೇವೆ, ರಕ್ಷಣೆಗೆ ಸಹಾಯವಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್: ಪಿಂಚಣಿ, ಕಾನೂನು ಸೇವೆ, ರಕ್ಷಣೆಗೆ ಸಹಾಯವಾಣಿ

ಶಿವಮೊಗ್ಗ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಹಿರಿಯ ನಾಗರಿಕರ ಆರೋಗ್ಯ ಮತ್ತು ಆರೈಕೆಯಲ್ಲಿ ಕೋವಿಡ್-19 ಪರಿಣಾಮ ಬೀರಬಹುದೆಂಬ ಆತಂಕದಿಂದ ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕರ್ನಾಟಕ ಘಟಕ ವಿಶೇಷ ಸಹಾಯ ಕೇಂದ್ರ ಸ್ಥಾಪಿಸಿದೆ.

ಕೊರೋನಾ ವೈರಸ್ ಮಹಾಮಾರಿಯಿಂದ ಒಂಟಿತನ, ಭಾವನಾತ್ಮಕ ಖಿನ್ನತೆಗೆ ಒಳಪಟ್ಟಿರುವ ಕರ್ನಾಟಕದ ಹಿರಿಯ ನಾಗರಿಕರು, ನಿರ್ಲಕ್ಷ್ಯಕ್ಕೊಳಪಟ್ಟಿರುವವರು, ರಕ್ಷಣೆಯ ಅಗತ್ಯವಿರುವವರು, ಪಿಂಚಣಿ ಮತ್ತು ಕಾನೂನು ಸೇವೆಗಳ ಬಗ್ಗೆ ಮಾಹಿತಿ ಬೇಕಾದವರು ಟೋಲ್ ಫ್ರೀ ಸಂಖ್ಯೆ 14567 ಗೆ ಕರೆ ಮಾಡಿ, ವಿಶೇಷ ಸಹಾಯ ಕೇಂದ್ರದ ಸಲಹೆಗಾರರು ಮತ್ತು ಸಮಾಜ ಕಾರ್ಯಕರ್ತರ ಸಲಹೆ, ಸೂಚನೆ, ಮಾರ್ಗದರ್ಶನ ಮತ್ತು ಬೆಂಬಲ ಪಡೆದುಕೊಳ್ಳುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ತಿಳಿಸಿರುತ್ತಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...