alex Certify ಐವತ್ತು ಸಾವಿರ ರೂ. ಹೂಡಿ, 3300 ಪಿಂಚಣಿ ಪಡೀರಿ; ಇದು ಇಂಡಿಯಾ ಪೋಸ್ಟ್ ಪೆನ್ಷನ್ ಸ್ಕೀಂ‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐವತ್ತು ಸಾವಿರ ರೂ. ಹೂಡಿ, 3300 ಪಿಂಚಣಿ ಪಡೀರಿ; ಇದು ಇಂಡಿಯಾ ಪೋಸ್ಟ್ ಪೆನ್ಷನ್ ಸ್ಕೀಂ‌

ಪ್ರತಿಯೊಬ್ಬರಿಗೂ ನಿವೃತ್ತಿ ಜೀವನಲ್ಲಿನ‌ ಆದಾಯದ ಬಗ್ಗೆ ಚಿಂತೆ ಇರುತ್ತದೆ. ದುಡಿಯವ ಸಂದರ್ಭದಲ್ಲಿ ಉಳಿಕೆ ಮಾಡಿಕೊಂಡು ನಿವೃತ್ತಿ ಜೀವನದಲ್ಲಿ ಬಳಸುವ ಬಗ್ಗೆ ಆಲೋಚನೆ ಇರುತ್ತದೆ.

ಹೂಡಿಕೆದಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಯೋಜಿಸುತ್ತಿದ್ದರೆ ಇಂಡಿಯಾ ಪೋಸ್ಟ್ ಮಾಸಿಕ ಆದಾಯ ಯೋಜನೆಯನ್ನು ಬಳಸಿಕೊಳ್ಳಬಹುದು.

ಇಂಡಿಯಾ ಪೋಸ್ಟ್ ಹೂಡಿಕೆಗಳ ಮೇಲಿನ ಸುರಕ್ಷತೆಯೊಂದಿಗೆ ಆಕರ್ಷಕ ಆದಾಯವನ್ನು ನೀಡುವ ಹೂಡಿಕೆ ಆಯ್ಕೆಗಳನ್ನು ಒದಗಿಸುತ್ತದೆ.

ಪೋಸ್ಟ್ ಆಫೀಸ್ ಎಂಐಎಸ್ ಯೋಜನೆಯು ಹೂಡಿಕೆದಾರರು ತಮ್ಮ ಉಳಿತಾಯವನ್ನು 1000 ಅಥವಾ 100 ರೂ.ಗಳಂತೆಯೂ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ.

ಎಂಐಎಸ್ ಯೋಜನೆಯಲ್ಲಿ ಮೂವರು ಹೂಡಿಕೆದಾರರಿಗೆ ಜಂಟಿ ಖಾತೆ ತೆರೆಯಲು ಅವಕಾಶವಿದೆ. ಜಂಟಿ ಖಾತೆಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಹಣ 9 ಲಕ್ಷ ರೂ. ಆಗಿರುತ್ತದೆ.

‘ಮುಟ್ಟಿನ ದಿನದಲ್ಲಿ ರಜೆ ನೀಡಿ’: ಮಹಿಳಾ ಶಿಕ್ಷಕಿಯರಿಂದ ಶುರುವಾಯ್ತು ಅಭಿಯಾನ

ಪ್ರಸ್ತುತ ಇಂಡಿಯಾ ಪೋಸ್ಟ್ ಎಂಐಎಸ್ ಯೋಜನೆಗೆ ಶೇ.6.6 ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ, ಹೂಡಿಕೆದಾರರು ಯೋಜನೆಯಲ್ಲಿ ಸರಳ ಬಡ್ಡಿಯನ್ನು ಪಡೆಯುತ್ತಾರೆ.

ಈ. ಯೋಜನೆಯಲ್ಲಿ ಐವತ್ತು ಸಾವಿರ ಹೂಡಿಕೆ ಮಾಡಿದರೆ ವಾರ್ಷಿಕ‌ 3300 ರೂ. ಪಿಂಚಣಿ ಸಿಗಲಿದೆ. ಐದು ವರ್ಷಗಳ ಅವಧಿಯಲ್ಲಿ ರೂ 16,500 ಬಡ್ಡಿಯನ್ನು ಪಡೆಯಬಹುದು.

ಹೂಡಿಕೆದಾರರು ಈ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ ಮಾಸಿಕ 550 ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದೇ ಮೊತ್ತದಲ್ಲಿ, ಹೂಡಿಕೆದಾರರು ಪ್ರತಿ ವರ್ಷ 6600 ರೂ. ಅಥವಾ ಐದು ವರ್ಷಗಳಲ್ಲಿ 33000 ರೂ. ಪಡೆಯಬಹುದು.

ಮಾಸಿಕ ಪಿಂಚಣಿಗಾಗಿ 2475 ಮಾಸಿಕ ಅಥವಾ 29700 ವಾರ್ಷಿಕ ಪಿಂಚಣಿ ಪಡೆಯಬೇಕೆಂದರೆ ಹೂಡಿಕೆದಾರರು ಈ ಯೋಜನೆಯಲ್ಲಿ 4.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗೆ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...