alex Certify ‘ಮುಟ್ಟಿನ ದಿನದಲ್ಲಿ ರಜೆ ನೀಡಿ’: ಮಹಿಳಾ ಶಿಕ್ಷಕಿಯರಿಂದ ಶುರುವಾಯ್ತು ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಮುಟ್ಟಿನ ದಿನದಲ್ಲಿ ರಜೆ ನೀಡಿ’: ಮಹಿಳಾ ಶಿಕ್ಷಕಿಯರಿಂದ ಶುರುವಾಯ್ತು ಅಭಿಯಾನ

ಉತ್ತರ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಮಹಿಳಾ ಶಿಕ್ಷಕರ ಸಂಘವು ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯದ ಕಳಪೆ ಸ್ಥಿತಿಯನ್ನು ಗಮನದಲ್ಲಿರಿಸಿ ಮಹಿಳಾ ಶಿಕ್ಷಕಿಯರಿಗೆ ಪ್ರತಿ ತಿಂಗಳಲ್ಲಿ ಮೂರು ದಿನ ಮುಟ್ಟಿನ ರಜೆ ನೀಡುವಂತೆ ಆಗ್ರಹಿಸಿ ಅಭಿಯಾನ ನಡೆಸುತ್ತಿದೆ.

ಈ ಅಭಿಯಾನವನ್ನು ನಡೆಸುತ್ತಿರುವ ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಣ ಇಲಾಖೆಯ ಮಹಿಳಾ ಶಿಕ್ಷಕಿಯರು, ಉತ್ತರ ಪ್ರದೇಶದ ಮಹಿಳಾ ಶಿಕ್ಷಕರ ಸಂಘ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳನ್ನು ಭೇಟಿ ಮಾಡಿದ್ದಾರೆ. ಹಾಗೂ ತಮ್ಮ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ಇನ್ನು ಅಭಿಯಾನದ ವಿಚಾರವಾಗಿ ಮಾತನಾಡಿದ ಸಂಘದ ಅಧ್ಯಕ್ಷೆ ಸುಲೋಚನಾ ಮೌರ್ಯ, ಹೆಚ್ಚಿನ ಶಾಲೆಗಳಲ್ಲಿ ಶಿಕ್ಷಕಿಯರು ಮುನ್ನೂರರಿಂದ ನಾಲ್ಕುನೂರು ಮಕ್ಕಳು ಬಳಕೆ ಮಾಡುವ ಶೌಚಾಲಯಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದೆ. ಇಲ್ಲೆಲ್ಲ ಶೌಚಾಲಯಗಳು ಸ್ವಚ್ಛವಾಗಿ ಇರೋದೇ ಇಲ್ಲ. ಇದರಿಂದ ಹೆಚ್ಚಿನ ಶಿಕ್ಷಕಿಯರು ಸೋಂಕಿಗೆ ಒಳಗಾಗುತ್ತಿದ್ದಾರೆ. ಶೌಚಾಲಯವನ್ನು ಬಳಕೆ ಮಾಡೋದನ್ನ ತಪ್ಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಶಿಕ್ಷಕಿಯರು ಶಾಲಾ ಅವಧಿಯಲ್ಲಿ ನೀರು ಕುಡಿಯೋದೇ ಇಲ್ಲ. ಇದರಿಂದ ಅವರ ಆರೋಗ್ಯ ಏರುಪೇರಾಗ್ತಿದೆ. ಋತುಚಕ್ರದ ಸಮಯದಲ್ಲಂತೂ ಶಿಕ್ಷಕಿಯರ ಕಷ್ಟ ಹೇಳತೀರದಾಗಿದೆ ಎಂದು ಹೇಳಿದ್ರು.

ನಮ್ಮಲ್ಲಿ 70 ಪ್ರತಿಶತ ಶಿಕ್ಷಕರು ಮಹಿಳೆಯರೇ ಆಗಿದ್ದಾರೆ. ಶಿಕ್ಷಕರ ಸಂಘದಲ್ಲಿ ಪುರುಷರ ಪ್ರಾಬಲ್ಯ ಇರೋದ್ರಿಂದ ಇಂತಹ ವಿಚಾರಗಳ ಮೇಲೆ ಗಮನ ಸೆಳೆಯಲು ಆಗೋದೇ ಇಲ್ಲ. ಆದರೆ ನಮಗೆ ಇದು ಅತೀ ಮುಖ್ಯವಾದ್ದರಿಂದ ಋತುಮತಿಯಾದ ಶಿಕ್ಷಕಿಯರಿಗೆ ಮೂರು ದಿನಗಳ ರಜೆ ನೀಡಬೇಕು ಎಂದು ಮೌರ್ಯ ಆಗ್ರಹಿಸಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...