alex Certify BIG NEWS: ಕೊರೊನಾ ತೀವ್ರ ಹೆಚ್ಚಳ, ಓಪನ್ ಆಗಲ್ಲ ಶಾಲೆ – ಮುಂದಿನ ಶೈಕ್ಷಣಿಕ ವರ್ಷವೂ ಆನ್ಲೈನ್ ಕ್ಲಾಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕೊರೊನಾ ತೀವ್ರ ಹೆಚ್ಚಳ, ಓಪನ್ ಆಗಲ್ಲ ಶಾಲೆ – ಮುಂದಿನ ಶೈಕ್ಷಣಿಕ ವರ್ಷವೂ ಆನ್ಲೈನ್ ಕ್ಲಾಸ್

ನವದೆಹಲಿ: ದೇಶದಲ್ಲಿ ಕೊರೋನಾ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಸೆಮಿಸ್ಟರ್ ನಲ್ಲಿ ಕೂಡ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುವುದಿಲ್ಲ.

ಹೆಚ್ಚಿನ ರಾಜ್ಯಗಳಲ್ಲಿ ಅಂತಹ ಲಕ್ಷಣಗಳು ಕಂಡು ಬರುತ್ತಿವೆ. ಮುಂದಿನ ಶೈಕ್ಷಣಿಕ ವರ್ಷ ಕೂಡ ಆನ್ಲೈನ್ ತರಗತಿಗಳೊಂದಿಗೆ ಆರಂಭವಾಗಲಿದೆ. ಅಂದ ಹಾಗೆ, ದೆಹಲಿ, ಪಂಜಾಬ್, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ಕೊರೋನಾ ಎರಡನೇ ಅಲೆ ಪರಿಣಾಮದಿಂದ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಇನ್ನೂ ಶಾಲೆಗಳು ಸರಿಯಾಗಿ ಆರಂಭವಾಗಿಲ್ಲ.

ಕೆಲವು ಶಾಲೆಗಳು ಆರಂಭವಾಗಿದ್ದರೂ ಸರಿಯಾಗಿ ತರಗತಿಗಳು ನಡೆದಿಲ್ಲ. ಮತ್ತೆ ಕೊರೊನಾ ಸೋಂಕು ಜಾಸ್ತಿ ಆದ ಕಾರಣ ಶಾಲೆಗಳನ್ನು ಬಂದ್ ಮಾಡಲಾಗಿದೆ. ಶೈಕ್ಷಣಿಕ ವರ್ಷವನ್ನು ಕೊರೋನಾ ಪರಿಸ್ಥಿತಿ ಹದಗೆಡಿಸುತ್ತಿದೆ. ಇದರಿಂದ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವ ಸಾಧ್ಯತೆ ಇಲ್ಲವೆನ್ನಲಾಗಿದೆ.

ಕೊರೋನಾ ಸೋಂಕು ಏರಿಕೆಯಾದ ಕಾರಣ ಕೆಲವು ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯುವ ಸಾಧ್ಯತೆ ಇಲ್ಲ. ಮುಂದಿನ ಶೈಕ್ಷಣಿಕ ವರ್ಷವನ್ನು ಕೂಡ ಆನ್ಲೈನ್ ಕ್ಲಾಸ್ ಆರಂಭಿಸಬೇಕಾದಂತಹ ಪರಿಸ್ಥಿತಿ ಎದುರಾಗಿದೆ. ಸದ್ಯಕ್ಕಂತೂ ತರಗತಿಗಳನ್ನು ಪ್ರಾರಂಭಿಸಲು ಪೂರಕವಾದ ವಾತಾವರಣ ಕಂಡು ಬರುತ್ತಿಲ್ಲ. ಇದು ಹೀಗೆ ಮುಂದುವರೆದರೆ, ಆನ್ಲೈನ್ ಕ್ಲಾಸ್ ನೊಂದಿಗೆ ಮುಂದಿನ ಶೈಕ್ಷಣೀಕ ವರ್ಷವನ್ನು ಆರಂಭಿಸಬೇಕಾದೀತು ಎಂದು ಹೇಳಲಾಗಿದೆ.

ಅಖಿಲ ಭಾರತ ಪೋಷಕರ ಸಂಘದ ಅಧ್ಯಕ್ಷ, ದೆಹಲಿ ವಿಶ್ವವಿದ್ಯಾಲಯ ಕಾರ್ಯಕಾರಿ ಮಂಡಳಿಯ ಸದಸ್ಯರಾದ ಶಶಾಂಕ್ ಅಗರ್ವಾಲ್ ಅವರು, ಆನ್ಲೈನ್ ಶಿಕ್ಷಣ ಅನಿವಾರ್ಯವಾಗುತ್ತದೆ. ಪ್ರಸ್ತುತ ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿಕೊಳ್ಳುವ ಬದಲು ಆನ್ ಲೈನ್ ಮೂಲಕವೇ ಪಾಠ ಮಾಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ಅಂದಾಜಿನ ಪ್ರಕಾರ, ಶಾಲೆಗಳನ್ನು ಮುಚ್ಚುವ ಕಾರಣದಿಂದಾಗಿ ಶಾಲೆ ಬಿಡುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಿನ ಶೇಕಡ 20 ರಷ್ಟು ಜಾಸ್ತಿಯಾಗಿದೆ.

ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಜನ ವಲಸೆ ಹೋಗಿದ್ದಾರೆ. ಆ ರಾಜ್ಯದ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಅಂತವರಿಗೆ ಕಷ್ಟವಾಗುತ್ತದೆ. ಶಾಲೆ ತೆರೆಯದ ಕಾರಣ ಮಕ್ಕಳಿಗೆ ಸಮಸ್ಯೆ ಎದುರಾಗಿದೆ. ಸದ್ಯಕ್ಕಂತೂ ಕೊರೋನಾ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶಾಲೆ ತೆರೆಯದಿರುವುದೇ ಸರಿಯಾದ ನಿರ್ಧಾರ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...