alex Certify ಲಾಕ್ ಡೌನ್ ಒತ್ತಡದಿಂದ ಕೂದಲು ಕಿತ್ತು ಕಿತ್ತು ಬೋಳಾಯ್ತು ತಲೆ: ಇದು 8 ವರ್ಷದ ಬಾಲಕಿಯ ಕಥೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಒತ್ತಡದಿಂದ ಕೂದಲು ಕಿತ್ತು ಕಿತ್ತು ಬೋಳಾಯ್ತು ತಲೆ: ಇದು 8 ವರ್ಷದ ಬಾಲಕಿಯ ಕಥೆ..!

Schoolgirl, 8, left almost bald after lockdown stress sees her rip out own  hair - Mirror Onlineಇಂಗ್ಲೆಂಡಿನ ಬ್ರಿಸ್ಟಲ್‌ನಲ್ಲಿರುವ ಎಂಟು ವರ್ಷದ ಬಾಲಕಿಯೊಬ್ಬಳು ಕೊರೋನಾ ಲಾಕ್‌ಡೌನ್ ಮತ್ತು ಶಾಲೆಯಲ್ಲಿನ ಅಡೆತಡೆಗಳ ಒತ್ತಡದಿಂದ ಬಳಲುತ್ತಿದ್ದರಿಂದ, ತನ್ನ ತಲೆಯನ್ನು ಬಹುತೇಕ ಬೋಳು ಬಿಟ್ಟಿದ್ದಾಳೆ. ಇದು ಆಕೆಗೆ ಅಸಾಮಾನ್ಯ ಕೂದಲು ಎಳೆಯುವ ಅಸ್ವಸ್ಥತೆಯನ್ನು ಉಂಟುಮಾಡಿದೆ.

ವರದಿಗಳ ಪ್ರಕಾರ, 2020 ರಲ್ಲಿ ಮೊದಲ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಒತ್ತಡಕ್ಕೊಳಗಾದ ನಂತರ ಅಮೆಲಿಯಾ ತನ್ನ ರೆಪ್ಪೆಗೂದಲುಗಳನ್ನು ಎಳೆಯಲು ಪ್ರಾರಂಭಿಸಿದ್ದಾಳೆ. ಲಾಕ್‌ಡೌನ್ ಮುಂದುವರೆದಂತೆ, ಹುಡುಗಿ ತನ್ನ ತಲೆಯ ಮೇಲಿನ ಕೂದಲನ್ನು ಸಹ ಹೊರತೆಗೆಯಲು ಪ್ರಾರಂಭಿಸಿದ್ದಾಳೆ.

ತನ್ನ ಸ್ನೇಹಿತರು ಮತ್ತು ಕುಟುಂಬವನ್ನು ಭೇಟಿಯಾಗಲು ಸಾಧ್ಯವಾಗದ ಕಾರಣ ಈ ರೀತಿ ಸಂಭವಿಸಿರಬಹುದು ಅಂತಾ ಅಮೆಲಿಯಾ ತಾಯಿ ಜೆಮ್ಮಾ ಅಂದುಕೊಂಡಿದ್ದಳು. ಲಾಕ್‌ಡೌನ್‌ ಒತ್ತಡವು ಟ್ರೈಕೊಟಿಲೊಮೇನಿಯಾ ಎಂದು ಕರೆಯಲ್ಪಡುವ ಸ್ಥಿತಿಯನ್ನು ಪ್ರಚೋದಿಸಬಹುದು ಎಂದು ಆಕೆ ನಂಬಿದ್ದಾಳೆ.
ಇವಳು ಎಷ್ಟು ತನ್ನ ತಲೆಗೂದಲು ಎಳೆದಿದ್ದಾಳೆ ಅಂದ್ರೆ, ತನ್ನ ತಲೆಯ ಹಿಂಭಾಗದಲ್ಲಿ ಕೆಲವು ಉದ್ದವಾದ ಎಳೆಗಳನ್ನು ಹೊರತುಪಡಿಸಿ ಯಾವುದೇ ಕೂದಲನ್ನು ಬಿಟ್ಟಿಲ್ಲ. ವಿಗ್ ಅಥವಾ ತಲೆಗೆ ಶಾಲು ಕಟ್ಟದೆ ಮನೆಯಿಂದ ಹೊರಬರುವುದಿಲ್ಲವಂತೆ.

ಇಲ್ಲಿದೆ ನೋಡಿ ವಿಭಿನ್ನ ಶೈಲಿಯ ಮ್ಯಾಗಿ ನೂಡಲ್ಸ್ ಖಾದ್ಯ…..!

ಇದೀಗ ಲಾಕ್ ಡೌನ್ ಸಡಿಲಗೊಂಡು, ಈಕೆಗೆ ಚಿಕಿತ್ಸೆ ನೀಡಲಾಗಿದೆ. ಶಾಲೆಗೂ ಹಿಂದಿರುಗಿದ್ದಾಳೆ. ಆದರೆ ತನ್ನ ಅಭ್ಯಾಸವನ್ನು ಮಾತ್ರ ಬದಲಾಯಿಸಲು ಸಾಧ್ಯವಾಗಿಲ್ಲವಂತೆ.

ಟ್ರೈಕೊಟಿಲೊಮೇನಿಯಾವು ಪ್ರತಿ 50 ಜನರಲ್ಲಿ ಒಬ್ಬರಿಗೆ ವಿವಿಧ ಹಂತಗಳವರೆಗೆ ಪರಿಣಾಮ ಬೀರುತ್ತದೆ. ಇವು ಸಾಮಾನ್ಯವಾಗಿ ಒತ್ತಡ, ಆತಂಕ ಅಥವಾ ಆಘಾತದಿಂದ ಬರುತ್ತದೆ ಎಂದು ಹೇಳಲಾಗಿದೆ. ಪ್ರತಿ ವರ್ಷವೂ ಅನೇಕ ಜನರು ಇದರಿಂದ ಬಳಲುತ್ತಿದ್ದಾರೆ. ಆದರೆ, ಇನ್ನೂ ಯಾರಿಗೂ ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲ ಎಂದು ಅಮೆಲಿಯಾ ತಾಯಿ ಹೇಳಿದ್ದಾರೆ.

England Girl Left Almost Bald After Lockdown Stress Sees Her Ripping Out  Own Hair - Sakshi

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...