alex Certify VIDEO: ವಾಕ್‌ ಮಾಡುತ್ತಿದ್ದವನಿಗೆ ಏಕಾಏಕಿ ಎದುರಾಯ್ತು ಪರ್ವತ ಸಿಂಹ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

VIDEO: ವಾಕ್‌ ಮಾಡುತ್ತಿದ್ದವನಿಗೆ ಏಕಾಏಕಿ ಎದುರಾಯ್ತು ಪರ್ವತ ಸಿಂಹ

ಬೆಚ್ಚಿ ಬೀಳಿಸುವ ವಿಡಿಯೋವೊಂದರಲ್ಲಿ, ಪರ್ವತ ಸಿಂಹವೊಂದು ವ್ಯಕ್ತಿಯೊಬ್ಬರನ್ನು ಅಟ್ಟಿಸಿಕೊಂಡು ಬರುತ್ತಿರುವ ಸನ್ನಿವೇಶ ದಾಖಲಾಗಿದೆ. ಲಾಸ್‌ ಏಂಜಲೀಸ್‌ ಬಳಿಯ ಸುಂದವಾದ ಗುಡ್ಡಗಾಡು ಪ್ರದೇಶವೊಂದರಲ್ಲಿ ಔಟಿಂಗ್ ಮೂಡ್‌ನಲ್ಲಿದ್ದ ವ್ಯಕ್ತಿಯೊಬ್ಬರು ಪ್ರಕೃತಿ ಸೌಂದರ್ಯ ಸವಿಯುತ್ತಾ ಸಾಗಿದ್ದ ವೇಳೆ ಪರ್ವತ ಸಿಂಹವೊಂದು ಇದ್ದಕ್ಕಿದ್ದಂತೆ ಅಟ್ಟಿಸಿಕೊಂಡು ಬಂದಿದೆ. ಬೆಚ್ಚಿ ಬಿದ್ದ ಈ ವ್ಯಕ್ತಿ ಜೋರಾಗಿ ಕೂಗಿಕೊಂಡಿದ್ದಾರೆ.

ರಿಯಾಯಿತಿ ದರದಲ್ಲಿ ಬಸ್ ಪಾಸ್ ವಿತರಣೆ: ವಿಕಲಚೇತನರ ಪಾಸ್ ನವೀಕರಣಕ್ಕೆ ಜ. 28 ಕೊನೆಯ ದಿನ

ಇನ್ನಷ್ಟು ಜೊರಾಗಿ ಕೂಗಿದ ವ್ಯಕ್ತಿಯ ಚೀರಾಟಕ್ಕೆ ಬೆದರಿದ ಪರ್ವತ ಸಿಂಹ ಹಾಗೇ ಅಲ್ಲಿಯೇ ಇದ್ದ ಪೊದೆಗಳ ನಡುವೆ ಅವಿತುಕೊಂಡಿದೆ. ಈ ವೇಳೆ ಸಿಕ್ಕ ಕೆಲ ಕ್ಷಣಗಳ ಸಮಯದಲ್ಲಿ ಆ ವ್ಯಕ್ತಿ ಅಲ್ಲಿಂದ ಬಚಾವಾಗಿದ್ದಾರೆ.

ಯೂಟ್ಯೂಬ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಒಂದು ಲಕ್ಷಕ್ಕೂ ಹೆಚ್ಚಿನ ವೀಕ್ಷಣೆಗಳು ಸಿಕ್ಕಿದ್ದು, ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...