alex Certify ಒಮಿಕ್ರಾನ್‌ ಆತಂಕದ ಮಧ್ಯೆ ಭಯ ಹುಟ್ಟಿಸಿದ ದೆಹಲಿ ವಿಮಾನ ನಿಲ್ದಾಣದ ಜನಜಂಗುಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮಿಕ್ರಾನ್‌ ಆತಂಕದ ಮಧ್ಯೆ ಭಯ ಹುಟ್ಟಿಸಿದ ದೆಹಲಿ ವಿಮಾನ ನಿಲ್ದಾಣದ ಜನಜಂಗುಳಿ

Crowd And Chaos Turning Delhi Airport Intoಒಮಿಕ್ರಾನ್ ಕಾಟದಿಂದಾಗಿ ಹೊಸದಾಗಿ ಅನುಷ್ಠಾನಕ್ಕೆ ತರಲಾದ ಪ್ರಯಾಣ ಮಾರ್ಗಸೂಚಿಗಳ ಸಮರ್ಪಕ ನಿರ್ವಹಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳದೇ ಇದ್ದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲಿ ಭಾರೀ ಜನಸ್ತೋಮ ನೆರೆದ ಘಟನೆ ಜರುಗಿದ್ದು ಭಾರೀ ಆತಂಕಕ್ಕೆ ಕಾರಣವಾಗಿದೆ.

ಕೋವಿಡ್-19ನ ಒಮಿ‌ಕ್ರಾನ್‌ ವೈರಾಣು ಇರುವ ಸಾಧ್ಯತೆಗಳು ಇರುವ ಕಾರಣ ’ಹೈ-ರಿಸ್ಕ್‌’ ದೇಶಗಳಿಂದ ಬರುವ ಮಂದಿ ಕಡ್ಡಯವಾಗಿ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳಿಗೆ ಒಳಗಾಗಬೇಕು ಎಂದು ನವೆಂಬರ್‌ 30ರಂದು ಕೇಂದ್ರ ಸರ್ಕಾರ ಕಳುಹಿಸಿರುವ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಇದರೊಂದಿಗೆ ಮಿಕ್ಕ ದೇಶಗಳಿಂದ ಬರುವ ಪ್ರಯಾಣಿಕರ ಪೈಕಿ 2%ನಷ್ಟು ಮಂದಿಯನ್ನು ರ‍್ಯಾಂಡಂ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ. ಈ ಎಲ್ಲರೂ ಪರೀಕ್ಷಾ ಫಲಿತಾಂಶ ಬರುವವರೆಗೂ ವಿಮಾನ ನಿಲ್ದಾಣದಲ್ಲಿಯೇ ಇದ್ದು, ನೆಗೆಟಿವ್‌ ವರದಿ ಬಂದಲ್ಲಿ ಮಾತ್ರವೇ ವಿಮಾನ ನಿಲ್ದಾಣದಿಂದ ಹೊರಗೆ ಬರಬಹುದು.

ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ

ಕಾಯುವ ಅವಧಿಯನ್ನು ಕಡಿಮೆ ಮಾಡಲೆಂದು ಇನ್ನಷ್ಟು ದುಬಾರಿಯಾದ ರ‍್ಯಾಪಿಡ್ ಆರ್‌ಟಿ-ಪಿಸಿಆರ್‌ ಪರೀಕ್ಷೆಗಳಿಗೆ ಒಳಾಗುತ್ತಿರುವ ಪ್ರಯಾಣಿಕರು ತಲಾ 3,500 ರೂ.ಗಳನ್ನು ಪಾವತಿ ಮಾಡುತ್ತಿದ್ದಾರೆ. ಈ ಪರೀಕ್ಷೆಯ ವರದಿಯು ಎರಡು ಗಂಟೆಗಳಲ್ಲಿ ಕೈತಲುಪಲಿದೆ. 500 ರೂ.ಗಳಿಗೆ ಮಾಡುವ ಸಾಮಾನ್ಯ ಆರ್‌ಟಿ-ಪಿಸಿಆರ್‌ ಪರೀಕ್ಷೆಯ ಫಲಿತಾಂಶ ಪಡೆಯಲು ಎಂಟು ಗಂಟೆಗಳವರೆಗೆ ಕಾಯಬೇಕಾಗುತ್ತದೆ.

ಇಂಥ ಅವ್ಯವಸ್ಥೆಗಳಿಂದಾಗಿ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವ ದೆಹಲಿ ವಿಮಾನ ನಿಲ್ದಾಣವು ’ಕೋವಿಡ್ ಹಾಟ್‌ಸ್ಪಾಟ್’ ಆಗಿದೆ ಎಂದು ಉದ್ಯಮಿ ಹರ್ಷ್ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

— Harsh Goenka (@hvgoenka) December 5, 2021

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...