alex Certify ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ರಾಶಿಯವರಿಗೆ 2022 ತರಲಿದೆ ಬಹಳ ಶುಭ

ಹೊಸ ವರ್ಷ ಬರ್ತಿದೆ. ಈ ವರ್ಷ ಕಷ್ಟ ಅನುಭವಿಸಿದವರು ಹೊಸ ವರ್ಷ ಶುಭವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದಾರೆ.ಹೊಸ ವರ್ಷದಲ್ಲಿ ಒಂದು ರಾಶಿಗೆ ಶುಭ ಫಲ ಪ್ರಾಪ್ತಿಯಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಚಲನೆ ಎಲ್ಲ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.

ಯಾವುದೋ ಒಂದು ರಾಶಿಯ ಮೇಲೆ ಗ್ರಹ ಒಳ್ಳೆಯ ಪ್ರಭಾವ ಬೀರಿದರೆ, ಆ ರಾಶಿಯವರಿಗೆ ಒಳ್ಳೆಯ ಫಲ ದೊರೆಯುತ್ತದೆ. ಅದೇ ಗ್ರಹಗತಿಗಳು ಚೆನ್ನಾಗಿಲ್ಲದಿದ್ದರೆ ಅದು ಜೀವನದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ. 2022 ನೇ ಇಸವಿಯ ರಾಶಿಫಲದ ಪ್ರಕಾರ ವೃಷಭ ರಾಶಿಯವರಿಗೆ ಅತ್ಯಂತ ಶುಭವಾಗಲಿದೆ.

ಭವಿಷ್ಯ: ವೃಷಭ ರಾಶಿಯವರಿಗೆ ನೌಕರಿಯಲ್ಲಿ ಪ್ರಮೋಶನ್ ಸಿಗಲಿದೆ. ಕೆಲಸದ ವಿಷಯದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಕೆಲಸ ಹುಡುಕುತ್ತಿರುವವರಿಗೆ ಹೊಸ ಕೆಲಸ ಸಿಗಲಿದೆ. ವರ್ಷದ ಆರಂಭದಲ್ಲಿ ಉದ್ಯಮಿಗಳಿಗೆ ಲಾಭವಾಗಲಿದೆ. ವರ್ಷದ ಕೊನೆಯಲ್ಲಿ ಪರಿಶ್ರಮಕ್ಕೆ ತಕ್ಕ ಧನಲಾಭವಾಗಲಿದೆ.

ಸಂಸಾರ: ಹೊಸ ವರ್ಷ ಕುಟುಂಬಕ್ಕೆ ಒಳಿತಾಗಲಿದೆ. ಕುಟುಂಬದವರ ಜೊತೆ ನೀವು ಖುಷಿಯಾಗಿರುತ್ತೀರಿ. ಕುಟುಂಬದವರ ಗೌರವಕ್ಕೆ ಪಾತ್ರರಾಗುತ್ತೀರಿ. ಕುಟುಂಬದವರಿಂದ ಆರ್ಥಿಕ ಲಾಭವೂ ಆಗಲಿದೆ. ಸಂಸಾರದಲ್ಲಿ ಬಂದ ಆರ್ಥಿಕ ಕಷ್ಟಗಳು ದೂರವಾಗುತ್ತದೆ.

ಪ್ರೀತಿ ಜೀವನ: ವೃಷಭ ರಾಶಿಯವರು ಯಾರನ್ನಾದರೂ ಪ್ರೀತಿಸಿದ್ದಲ್ಲಿ ಅವರಿಗೆ ಮದುವೆಯ ಯೋಗವಿದೆ. ನಿಮ್ಮ ಮದುವೆಯ ನಂತರದ ಜೀವನವೂ ಸುಖವಾಗಿರಲಿದೆ. ಹೆಂಡತಿ ನಿಮಗೆ ಜೊತೆಯಾಗಿ ನಿಲ್ಲುತ್ತಾಳೆ. ಅವಳ ಜೊತೆಗೆ ನೀವು ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ.

ಆರ್ಥಿಕ ಸ್ಥಿತಿ : ವೃಷಭ ರಾಶಿಯವರಿಗೆ 2022 ರಲ್ಲಿ ಆರ್ಥಿಕ ಪರಿಸ್ಥಿತಿಯೂ ಚೆನ್ನಾಗಿರಲಿದೆ. ಆರ್ಥಿಕವಾಗಿ ಉನ್ನತಿ ಹೊಂದುವಿರಿ ಮನೆಯಲ್ಲಿ ಖರ್ಚು ಹೆಚ್ಚಲಿದೆ. ಆಸ್ತಿಗೆ ಹಣ ಹೂಡಿಕೆ ಮಾಡಲು 2022 ಸರಿಯಾದ ಸಮಯ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...