alex Certify ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ʼಸುಪ್ರೀಂʼ ತೆರೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ಕೊನೆಗೂ ʼಸುಪ್ರೀಂʼ ತೆರೆ

ಛತ್ತೀಸಗಢದ ಸುರ್ಗುಜಾ ಜಿಲ್ಲೆಯ ಸೀತಾಪುರ ಗ್ರಾಮದಲ್ಲಿ ತುಂಡು ಭೂಮಿಗಾಗಿ ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಸುಪ್ರೀಂ ಕೋರ್ಟ್​ ಕೊನೆಗೂ ತೆರೆ ಎಳೆದಿದೆ. 1963ರಲ್ಲಿ 100 ರೂಪಾಯಿಗೆ ಖರೀದಿ ಮಾಡಲಾಗಿದ್ದ ಸಣ್ಣ ಪ್ರದೇಶವು ದಶಕಗಳಿಂದ ವಿವಾದದ ಕೇಂದ್ರ ಬಿಂದುವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಎನ್​.ವಿ. ರಮಣ, ನ್ಯಾ. ಎ.ಎಸ್.​ ಬೋಪಣ್ಣ ಹಾಗೂ ಹೃಷಿಕೇಶ್​ ರಾಯ್​ ನೇತೃತ್ವದ ತ್ರಿಸದಸ್ಯ ಪೀಠ ಅರ್ಜಿದಾರ ವಿರೇಂದ್ರ ಕುಮಾರ್​ ಸಿಂಗ್​​ರ ತಾಳ್ಮೆಗೆ ಮೆಚ್ಚುಗೆ ಸೂಚಿಸಿದೆ. ಸಣ್ಣ ಭೂಮಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿರುವ ವಿರೇಂದ್ರ ಕುಮಾರ್​​ ಸಿಂಗ್​ ಮೇಲೆ ಕೋರ್ಟ್ ಸಮಯ ವ್ಯರ್ಥ ಮಾಡಿದ್ದರ ಹಿನ್ನೆಲೆ ದಂಡ ವಿಧಿಸುವ ಸಾಧ್ಯತೆಯೂ ಇತ್ತು. ಆದರೂ ಸಹ ತಾಳ್ಮೆಯಿಂದ ಇಷ್ಟು ದಿನಗಳ ಕಾಲ ಹೋರಾಟ ಮಾಡಿದ್ದಾರೆ ಎಂದು ಹೇಳಿದೆ.

ಐಐಟಿ ಕ್ಯಾಂಪಸ್​ನಲ್ಲಿ ಸುಟ್ಟು ಕರಕಲಾದ ಮೃತದೇಹ ಪತ್ತೆ

ಈ ಮೊದಲು ಟ್ರಯಲ್​ ಕೋರ್ಟ್​ನಲ್ಲಿ ವಿರೇಂದ್ರ ಕುಮಾರ್​ ಸಿಂಗ್​ ಜಾಗ ವಿವಾದ ಸಂಬಂಧ ನ್ಯಾಯಕ್ಕೆ ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ವಿರೇಂದ್ರ ಕುಮಾರ್​ ಸಿಂಗ್​ ಹೇಳುವ ಪ್ರಕಾರ ಇವರು ಪರಶುರಾಮ್​ ಎಂಬವರ ಬಳಿ 1963 ಮಾರ್ಚ್ 19ನೇ ತಾರೀಖಿನಂದು ನೂರು ರೂಪಾಯಿಗಳನ್ನ ನೀಡಿ 0.287 ಹೆಕ್ಟೇರ್​ ಜಾಗವನ್ನ ಖರೀದಿ ಮಾಡಿದ್ದರು.

ಆದರೆ ಪರಶುರಾಮ್​ 1979 ಜೂನ್​ 22ರಂದು ಇದೇ ಜಾಗವನ್ನ ಇಂದ್ರಜೀತ್​ ಸಿಂಗ್​ ಬೇಡಿಗೆ ಮಾರಾಟ ಮಾಡಿದ್ದಾರೆ. ಅಲ್ಲದೇ ಸರ್ಕಾರಿ ದಾಖಲೆಗಳಲ್ಲಿ ಬೇಡಿ ಹೆಸರನ್ನ ನಮೂದಿಸಲಾಗಿದೆ. ಆದರೆ ಬೇಡಿ ನೀಡಿರುವ ಮಾಹಿತಿ ಪ್ರಕಾರ ಅವರು 1979ರ ಫೆಬ್ರವರಿ 26ರಂದು ಪರಶುರಾಮ್, ಅವರ ಸಹೋದರ ಹಾಗೂ ಅವರ ತಾಯಿಯಿಂದ 700 ರೂಪಾಯಿಗೆ ಈ ಜಾಗ ಖರೀದಿ ಮಾಡಿದ್ದೇನೆ ಹಾಗೂ ಈ ಜಾಗ ಎಂದಿಗೂ ವಿರೇಂದ್ರ ಕುಮಾರ್​ ಸಿಂಗ್​ರದ್ದಾಗಿರಲಿಲ್ಲ ಎಂದು ಹೇಳಿದ್ದರು.

ಮ‌ಗುವಿನ ನ್ಯಾಪ್ಪಿ ತೆಗೆಯುವ ಮುನ್ನ ಬೇಕಂತೆ ಅನುಮತಿ…!

ವಾದ ವಿವಾದಗಳನ್ನ ಆಲಿಸಿದ ಟ್ರಯಲ್​ ಕೋರ್ಟ್ ವಿರೇಂದ್ರ ಕುಮಾರ್​ ಸಿಂಗ್​ರ ವಾದಕ್ಕೆ ಪೂರಕ ಎನಿಸುವ ಯಾವುದೇ ದಾಖಲೆ ಸಿಗದ ಕಾರಣ ಅವರ ಅರ್ಜಿಯನ್ನ ತಳ್ಳಿ ಹಾಕಿತ್ತು. ಇದಾದ ಬಳಿಕ ವಿಚಾರಣಾ ನ್ಯಾಯಾಲದ ತೀರ್ಪನ್ನ ಪ್ರಶ್ನಿಸಿ ಮೇಲಿನ ಹಂತದ ಕೋರ್ಟ್ ಮೆಟ್ಟಿಲೇರಿದ್ದ ವಿರೇಂದ್ರ ಕುಮಾರ್ ಸಿಂಗ್​ಗೆ ಅಲ್ಲೂ ಮುಖಭಂಗವಾಗಿತ್ತು.

ಕೊನೆಗೆ ಹೈಕೋರ್ಟ್ ಮೆಟ್ಟಿಲೇರಿದ್ದ ಸಿಂಗ್​ಗೆ ಅಲ್ಲಿ ಕೂಡ ಅವರ ಪರವಾಗಿ ತೀರ್ಪು ಸಿಕ್ಕಿರಲಿಲ್ಲ. 1995 ಮೇ 30ರಿಂದ ಕಾನೂನು ಹೋರಾಟ ಆರಂಭಿಸಿದ್ದ ಸಿಂಗ್​ ಸುಪ್ರೀಂ ಕೋರ್ಟ್​ಗೆ ಮೊರೆ ಹೋಗಿದ್ದರು. ಗುರುವಾರ ಈ ಸಂಬಂಧ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್ ವಿರೇಂದ್ರ ಕುಮಾರ್ ಸಿಂಗ್​ ಈ ಭೂಮಿಯ ಮಾಲೀಕ ಅನ್ನೋದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲದ ಕಾರಣ ಹೈಕೋರ್ಟ್ ಆದೇಶವನ್ನ ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...