alex Certify SBI ನಲ್ಲಿ ‘ಜನ್​ ಧನ್’​ ಖಾತೆ ಹೊಂದಿರುವವರಿಗೆ ಗುಡ್​ ನ್ಯೂಸ್​ : 2 ಲಕ್ಷ ರೂ. ವರೆಗೆ ಸಿಗಲಿದೆ ಉಚಿತ ವಿಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ನಲ್ಲಿ ‘ಜನ್​ ಧನ್’​ ಖಾತೆ ಹೊಂದಿರುವವರಿಗೆ ಗುಡ್​ ನ್ಯೂಸ್​ : 2 ಲಕ್ಷ ರೂ. ವರೆಗೆ ಸಿಗಲಿದೆ ಉಚಿತ ವಿಮೆ

ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದಲ್ಲಿ ಜನ್​ಧನ್​ ಖಾತೆಯನ್ನ ಹೊಂದಿರುವ ಗ್ರಾಹಕರು 2 ಲಕ್ಷ ರೂಪಾಯಿ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯವನ್ನ ಹೊಂದಬಹುದಾಗಿದೆ. ಜನ್​​ ಧನ್​ ಖಾತೆಯನ್ನ ಹೊಂದಿರುವವರಿಗೆ ಎಸ್​ಬಿಐ ಬ್ಯಾಂಕ್​​ 2 ಲಕ್ಷ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯ ನಿಡೋದ್ರ ಜೊತೆಗೆ ರೂಪೇ ಡೆಬಿಟ್​ ಕಾರ್ಡ್​ನ್ನೂ ನೀಡಲಿದೆ.

ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್​ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!

ಜನ್​ಧನ್​ ಖಾತೆದಾರ ವಿದೇಶದಲ್ಲಿ ಅಪಘಾತಕ್ಕೀಡಾದರೂ ಸಹ ವಿಮಾ ಮೊತ್ತವನ್ನ ಪಡೆಯಬಹುದು. 2018 ಆಗಸ್ಟ್​ 28ರಂದು ಖಾತೆ ತೆರೆದ ವ್ಯಕ್ತಿಗೆ 1 ಲಕ್ಷ ಹಾಗೂ ಈ ದಿನಾಂಕದ ಬಳಿಕ ಜನ್​ ಧನ್​ ಖಾತೆ ತೆರೆದವರಿಗೆ 2 ಲಕ್ಷ ರೂಪಾಯಿ ವಿಮಾ ಮೊತ್ತ ಸಿಗಲಿದೆ.

GOOD NEWS: ಕೇವಲ 999 ರೂ. ಗಳಿಗೆ ವಿಮಾನ ಪ್ರಯಾಣ ಲಭ್ಯ

ಪ್ರಧಾನ್​ ಮಂತ್ರಿ ಜನ್ ಧನ್​ ಯೋಜನೆಯನ್ನ ಪ್ರಧಾನಿ ಮೋದಿ 2018ರ ಆಗಸ್ಟ್​ 28ರಂದು ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್​ ವ್ಯವಹಾರ ನಡೆಸುವಂತಾಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು.

ಜನ್​ ಧನ್​ ಖಾತೆಯನ್ನ ತೆರೆಯುವ ವ್ಯಕ್ತಿಯು ಕನಿಷ್ಟ ಮೊತ್ತವನ್ನ ಖಾತೆಯಲ್ಲಿ ಇಡಬೇಕು ಎಂದೇನಿಲ್ಲ. ಈ ಖಾತೆಯನ್ನ ಹೊಂದಿರುವವರಿಗೆ ರೂಪೇ ಕಾರ್ಡ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನ ನೀಡಲಾಗುತ್ತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...