alex Certify ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ SBI ನೀಡಿದೆ ಖುಷಿ ಸುದ್ದಿ….! 342 ರೂ.ಗೆ ಸಿಗಲಿದೆ 4 ಲಕ್ಷ ರೂ. ಲಾಭ

ಕೊರೊನಾ ಜನರಲ್ಲಿ ಜೀವ ಭಯ ಹುಟ್ಟಿಸಿದೆ. ಕೊರೊನಾದಿಂದಾಗಿ ಜನರು ವಿಮೆ ಮಹತ್ವ ತಿಳಿದಿದ್ದಾರೆ. ಅನೇಕರು ವಿಮೆ ಸೌಲಭ್ಯ ಪಡೆಯಲು ಮುಂದಾಗಿದ್ದಾರೆ. ಸರ್ಕಾರ ಕೂಡ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಕೇಂದ್ರ ಸರ್ಕಾರ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯನ್ನು ದೇಶದ ಜನತೆಗೆ ನೀಡಿದೆ. ಈ ಯೋಜನೆ 4 ಲಕ್ಷ ರೂಪಾಯಿವರೆಗೆ ರಕ್ಷಣೆ ನೀಡಲಿದೆ.

ದೇಶದ ಅತಿದೊಡ್ಡ ಬ್ಯಾಂಕ್, ಎಸ್‌ಬಿಐ ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ವಿಮೆ ಮಾಡಿ ಮತ್ತು ಚಿಂತೆ-ಮುಕ್ತ ಜೀವನ ನಡೆಸಿ ಎಂದು ಎಸ್ಬಿಐ ಟ್ವೀಟ್ ಮಾಡಿದೆ. ಆಟೋ ಡೆಬಿಟ್ ಸೌಲಭ್ಯದ ಮೂಲಕ ಉಳಿತಾಯ ಬ್ಯಾಂಕ್ ಖಾತೆದಾರರಿಂದ ಪ್ರೀಮಿಯಂ ಕಡಿತವಾಗುತ್ತದೆ.

ಹೊಸ ಗೆಳೆಯನನ್ನು ಹುಡುಕಿಕೊಂಡ ಹೃತಿಕ್‌ ರೋಷನ್‌ ಮಾಜಿ ಪತ್ನಿ

ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ, ಅಪಘಾತದಲ್ಲಿ ವಿಮಾದಾರರು ಮರಣ ಹೊಂದಿದರೆ ಅಥವಾ ಸಂಪೂರ್ಣವಾಗಿ ಅಂಗವಿಕಲರಾದರೆ, 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ವಿಮಾದಾರನು ಭಾಗಶಃ ಅಥವಾ ಶಾಶ್ವತವಾಗಿ ಅಂಗವಿಕಲನಾದರೆ 1 ಲಕ್ಷ ರೂಪಾಯಿ ಸಿಗುತ್ತದೆ. 18 ರಿಂದ 70 ವರ್ಷದೊಳಗಿನ ಯಾವುದೇ ವ್ಯಕ್ತಿ ವಿಮೆ ಪಡೆಯಬಹುದು. ವಾರ್ಷಿಕ ಪ್ರೀಮಿಯಂ  12 ರೂಪಾಯಿಯಾಗಿರುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಲ್ಲಿ, ವಿಮೆದಾರನ ಮರಣದ ನಂತರ ನಾಮಿನಿಗೆ 2 ಲಕ್ಷ ರೂಪಾಯಿ ನೀಡಲಾಗುತ್ತದೆ. 18 ರಿಂದ 50 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ವಿಮೆ ಪಡೆಯಬಹುದು. 330 ರೂಪಾಯಿ ವಾರ್ಷಿಕ ಪ್ರೀಮಿಯಂ ಪಾವತಿಸಬೇಕು.

ಬ್ಯಾಂಕ್ ಖಾತೆ ಹೊಂದಿರುವುದು ಅವಶ್ಯಕ. ಒಂದೇ ಖಾತೆಯಲ್ಲಿ ಎರಡು ವಿಮೆ ಪಡೆಯಬಹುದು. ಆದ್ರೆ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...