alex Certify SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ನಿಂದ ದಾಲ್ ಸರೋವರದಲ್ಲಿ ತೇಲುವ ಎಟಿಎಂ…!

ಶ್ರೀನಗರದ ಜಗದ್ವಿಖ್ಯಾತ ದಾಲ್ ಸರೋವರದಲ್ಲಿ ತೇಲಾಡುವ ಎಟಿಎಂ ಒಂದನ್ನು ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ತೆರೆದಿದೆ.

ದೋಣಿಯೊಂದರ ಮೇಲೆ ಈ ಎಟಿಎಂ ಇದ್ದು ಈ ಪ್ರದೇಶಕ್ಕೆ ಬರುವ ದೊಡ್ಡ ಸಂಖ್ಯೆಯ ಪ್ರವಾಸಿಗರಿಗೆ ಹಣ ಹಿಂಪಡೆಯಲು ಬಹಳ ಅನುಕೂಲವಾಗಲಿದೆ. ಆಗಸ್ಟ್‌ 16ರಂದು ಎಸ್‌ಬಿಐ ಚೇರ್ಮನ್ ದಿನೇಶ್ ಕುಮಾರ್‌ ಕಾರಾ ಈ ಎಟಿಎಂ ಉದ್ಘಾಟನೆ ಮಾಡಿದ್ದಾರೆ.

35 ಎಕರೆ ಅರಣ್ಯ ‘ಆಮ್ಲಜನಕ ಪಾರ್ಕ್’ ಆಗಿ ಅಭಿವೃದ್ಧಿ

ಈ ಹಿಂದೆ 2004ರಲ್ಲಿ ತೇಲಾಡುವ ಇನ್ನೊಂದು ಎಟಿಎಂ ಅನ್ನು ಸ್ಟೇಟ್‌ ಬ್ಯಾಂಕ್ ಉದ್ಘಾಟಿಸಿತ್ತು. ಕೇರಳ ನೌಕಾಯಾನ ಹಾಗೂ ಒಳನಾಡು ಜಲಸಾರಿಗೆ ನಿಗಮದ ಝಂಕರ್‌ ಹಾಯಿದೋಣಿಯೊಂದರ ಮೇಲೆ ಎಟಿಎಂ ಸ್ಥಾಪಿಸಲಾಗಿತ್ತು.

ದೇಶಾದ್ಯಂತ 22,224 ಔಟ್‌ಲೆಟ್‌ಗಳನ್ನು ಹೊಂದಿರುವ ಎಸ್‌ಬಿಐ, ಒಟ್ಟಾರೆ 63,906 ಎಟಿಎಂ/ಸಿಡಿಎಂಗಳು ಹಾಗೂ 71,705 ಬಿಸಿ ಔಟ್‌ಲೆಟ್‌ಗಳನ್ನು ಹೊಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...