alex Certify ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರ ಕುಂದುಕೊರತೆ ಆಲಿಸಲು SBI ನಿಂದ ಹೊಸ ಸಹಾಯವಾಣಿ

ಎಸ್‌.ಬಿ.ಐ. ತನ್ನ ಗ್ರಾಹಕ ಸೇವೆಗಳಿಗಾಗಿ ಹೊಸ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಗ್ರಾಹಕರು ತಮ್ಮ ದೂರುಗಳನ್ನು ದೇಶದ ಸಾರ್ವಜನಿಕ ಸ್ವಾಮ್ಯದ ಬ್ಯಾಂಕಿನೊಂದಿಗೆ ಹಂಚಿಕೊಳ್ಳಬಹುದಾಗಿದೆ.

ಹೊಸ ಸಂಪರ್ಕ ಸಂಖ್ಯೆಯನ್ನು ಘೋಷಿಸಿದ ಎಸ್‌.ಬಿ.ಐ., “ಫೋನ್ ಬ್ಯಾಂಕಿಂಗ್ ಈಗ ಇನ್ನಷ್ಟು ಉತ್ತಮವಾಗಿದೆ ! ಎಸ್‌.ಬಿ.ಐ. ಸಂಪರ್ಕ ಕೇಂದ್ರವು ಈಗ ಸುಲಭವಾಗಿ ಡಯಲ್ ಮಾಡಬಹುದಾದ ಸಂಖ್ಯೆಯನ್ನು ಪಡೆದಿದೆ,” ಎಂದು ಟ್ವೀಟ್ ಮಾಡಿದೆ.

ಹೊಸ ಶೈಲಿಯಲ್ಲಿ ‘ಬಚ್ಪನ್ ಕಾ ಪ್ಯಾರ್’ ಹಾಡಿದ ಇಂಟರ್ನೆಟ್ ಸೆನ್ಸೇಷನ್ ಸಹದೇವ್

“ಟೋ‌ಲ್-ಫ್ರೀ ಸಂಖ್ಯೆ 1800 1234 ಮೂಲಕ ನಮಗೆ ಕರೆ ಮಾಡಿ ನಮ್ಮ ವೈವಿಧ್ಯಮಯ ಸೇವೆಗಳನ್ನು ಎಸ್‌.ಬಿ.ಐ. ಸಂಪರ್ಕ ಕೇಂದ್ರದ ಮೂಲಕ ಪಡೆಯಿರಿ,” ಎಂದು ಎಸ್‌.ಬಿ.ಐ. ಟ್ವೀಟ್ ಮಾಡಿದೆ.

ಎಟಿಎಂಗಳಲ್ಲಿ ಹಣ ಹಿಂಪಡೆಯುವುದನ್ನು ಇನ್ನಷ್ಟು ಸುಭದ್ರವಾಗಿಲು ಮುಂದಾದ ಎಸ್‌.ಬಿ.ಐ. ಇತ್ತೀಚಿಗಷ್ಟೇ ಓಟಿಪಿ-ಆಧರಿತ ನಗದು ಹಿಂಪಡೆತದ ವ್ಯವಸ್ಥೆಯನ್ನು ಪರಿಚಯಿಸಿತ್ತು. ಈ ಮೂಲಕ ವಂಚಕರ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ಕೆ ತಾನು ಮುಂದಾಗಿರುವುದಾಗಿ ಎಸ್‌.ಬಿ.ಐ. ಹೇಳಿಕೊಂಡಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...