alex Certify SBI ಗ್ರಾಹಕರೇ ಗಮನಿಸಿ: ಮಿಸ್ಡ್‌ ಕಾಲ್‌ ಮೂಲಕ ಸಿಗುತ್ತೆ ʼತ್ವರಿತ ಸಾಲʼದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SBI ಗ್ರಾಹಕರೇ ಗಮನಿಸಿ: ಮಿಸ್ಡ್‌ ಕಾಲ್‌ ಮೂಲಕ ಸಿಗುತ್ತೆ ʼತ್ವರಿತ ಸಾಲʼದ ಮಾಹಿತಿ

ತ್ವರಿತ ಸಾಲ ಬೇಕಾದ ಗ್ರಾಹಕರಿಗಾಗಿ ಸ್ಟೇಟ್‌ ಬ್ಯಾಂಕ್, ಎಕ್ಸ್‌ಪ್ರೆಸ್ ಕ್ರೆಡಿಟ್ ವೈಯಕ್ತಿಕ ಸಾಲದ ಸೌಲಭ್ಯವನ್ನು ತಂದಿದ್ದು, ಈ ಸಾಲಕ್ಕೆ ತುರ್ತು ಅನುಮೋದನೆ ಸಿಗಲಿದೆ.

ಮದುವೆ ಅಥವಾ ಹಾಲಿಡೇ, ತುರ್ತು ಪರಿಸ್ಥಿತಿ, ದಿಢೀರ್‌ ಖರೀದಿ ಯಾವುದೇ ಇರಲಿ, ಎಸ್‌ಬಿಐ ಗ್ರಾಹಕರು ಕನಿಷ್ಠ ದಾಖಲಾತಿಗಳ ಬಲದೊಂದಿಗೆ ಎಕ್ಸ್‌ಪ್ರೆಸ್‌ ವೈಯಕ್ತಿಕ ಸಾಲದ ಮೂಲಕ ತ್ವರಿತ ಸಾಲ ಪಡೆಯಬಹುದಾಗಿದೆ. ಈ ಸಾಲದ ಮೇಲೆ ಬಡ್ಡಿ ದರವು 9.6%ನಷ್ಟು ಇರಲಿದೆ.

ಇದಕ್ಕಾಗಿ ಒಂದೇ ಒಂದು ಮಿಸ್ಡ್‌ ಕಾಲ್ ಅಥವಾ ಸಂದೇಶ ಕಳುಹಿಸಿದರೆ ಸಾಕು. SMS <PERSONAL> ಎಂದು ಟೈಪ್ ಮಾಡಿ 7208933145 ಕಳುಹಿಸಿದರೆ ಅಥವಾ 7208933142ಗೆ ಮಿಸ್ಡ್‌ ಕಾಲ್ ಕೊಟ್ಟರೆ ಸಾಕು. 1800-11-2211 ಕರೆ ಮಾಡುವ ಮೂಲಕ ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

20 ಲಕ್ಷ ರೂ.ಗಳವರೆಗೆ ಸಾಲ ನೀಡುವ ಸಾಧ್ಯತೆಯನ್ನು ಎಕ್ಸ್‌ಪ್ರೆಸ್ ಕ್ರೆಡಿಟ್‌ನಲ್ಲಿ ಕೊಡಲಾಗಿದೆ. ಇದಕ್ಕೆ ಪರಿಷ್ಕರಣಾ ವೆಚ್ಚವು ಕಡಿಮೆ ಇರಲಿದ್ದು, ಯಾವುದೇ ಭದ್ರತೆ ಅಥವಾ ಗ್ಯಾರಂಟಿ ಕೊಡಬೇಕಾದ ಅಗತ್ಯವಿಲ್ಲವೆಂದು ಬ್ಯಾಂಕ್ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...