alex Certify ಈ ಪಂಚಸೂತ್ರ ಅಳವಡಿಸಿಕೊಂಡು ಕಣ್ಣಿನ ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಪಂಚಸೂತ್ರ ಅಳವಡಿಸಿಕೊಂಡು ಕಣ್ಣಿನ ಸಮಸ್ಯೆಗಳಿಗೆ ಹೇಳಿ ಗುಡ್‌ ಬೈ

ಇತ್ತೀಚೆಗಿನ ನಮ್ಮ ಜೀವನ ಶೈಲಿ ಬದಲಾವಣೆಯಿಂದ ಕಣ್ಣಿನ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗಿದೆ. ಮೊಬೈಲ್, ಟೆಲಿವಿಷನ್, ಕಂಪ್ಯೂಟರ್ ಬಳಕೆಯಿಂದಾಗಿ ದೃಷ್ಟಿ ಕ್ಷೀಣಿಸುತ್ತಿರುವುದು ಸಾಮಾನ್ಯವಾಗಿದೆ. ಅಷ್ಟೆ ಅಲ್ಲ. ಶುಷ್ಕ ಕಣ್ಣುಗಳು, ಕಣ್ಣಿನ ಪೊರೆ, ಮ್ಯಾಕ್ಯುಲರ್ ಡಿಜೆನರೇಶನ್ ಸೇರಿದಂತೆ ಹಲವು ರೀತಿಯ ಕಣ್ಣಿನ ಸಮಸ್ಯೆಯಿಂದ ಅನೇಕರು ಬಳಲುತ್ತಿದ್ದಾರೆ.

“ಪ್ರಪಂಚದಾದ್ಯಂತ 1 ಶತಕೋಟಿ ಜನರು ದೃಷ್ಟಿಹೀನತೆ ಸಮಸ್ಯೆಯಿಂದ ಬಳಲುತ್ತಿದ್ದಾರೆ.” ಒಟ್ಟಾರೆ ನಮ್ಮ ಆರೋಗ್ಯದ ಜೊತೆಗೆ, ಕಣ್ಣುಗಳ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ. ಮತ್ತು ಕೆಲವು ಪೌಷ್ಟಿಕ-ಭರಿತ ಆಹಾರಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ದೀರ್ಘಾವಧಿವರೆಗೆ ಧನಾತ್ಮಕ ಪರಿಣಾಮಗಳನ್ನು ಬೀರುತ್ತವೆ.

ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುವ ಕೆಲವು ಸುಲಭ ಸಲಹೆಗಳ ಬಗ್ಗೆ ನಿಮಗೆ ತಿಳಿಸುತ್ತೇವೆ, ಮುಂದೆ ಓದಿ..

– ವಿಟಮಿನ್ ಸಮೃದ್ಧ ಆಹಾರಗಳನ್ನು ಸೇವಿಸಿ:

ಇದು ನಮ್ಮನ್ನು ಪೋಷಿಸುವುದರ ಜೊತೆಗೆ, ಕೆಲವು ಅಗತ್ಯವಾದ ಜೀವಸತ್ವಗಳು ಒಟ್ಟಾರೆ ಕಣ್ಣಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.  ತಜ್ಞರ ಪ್ರಕಾರ, ವಿಟಮಿನ್ ಎ, ಸಿ ಮತ್ತು ಇ ಕಣ್ಣಿನ ಪೊರೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಸೇರಿದಂತೆ ಕೆಲವು ಕಣ್ಣಿನ ಕಾಯಿಲೆಗಳ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿಯೇ ತಜ್ಞರು ನಮ್ಮ ಕಣ್ಣಿನ ಆರೋಗ್ಯಕ್ಕಾಗಿ ಸಿಟ್ರಿಕ್ ಹಣ್ಣುಗಳು, ಬೀಜಗಳು, ಮೀನು ಇತ್ಯಾದಿಗಳನ್ನು ನಮ್ಮ ದೈನಂದಿನ ಆಹಾರ ಕ್ರಮದಲ್ಲಿ ಸೇರಿಸಲು ಸಲಹೆ ನೀಡುತ್ತಾರೆ.

– ಹಸಿರು ತರಕಾರಿಗಳನ್ನು ಸೇವಿಸಿ:

ಸೊಪ್ಪುಗಳು ಮತ್ತು ತರಕಾರಿಗಳು ಆರೋಗ್ಯಕರ ಪೋಷಕಾಂಶಗಳಿಂದ ತುಂಬಿರುತ್ತವೆ. ಅದು ನಮ್ಮ ಕಣ್ಣುಗಳು ಸೇರಿದಂತೆ ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಕಾಡೆಮಿ ಆಫ್ ನ್ಯೂಟ್ರಿಷನ್ ಅಂಡ್ ಡಯೆಟಿಕ್ಸ್ ಪ್ರಕಾರ, “ಸೊಪ್ಪುಗಳು ಲ್ಯೂಟಿನ್, ವಿಟಮಿನ್ ಗಳು ಮತ್ತು ಬೀಟಾ-ಕ್ಯಾರೋಟಿನ್ ಗಳ ಸಮೃದ್ಧ ಮೂಲವಾಗಿದೆ. ಇದು ಯುವಿ ಕಿರಣಗಳು ಮತ್ತು ವಿಕಿರಣಗಳಿಂದ ನಮ್ಮ ಕಣ್ಣುಗಳನ್ನು ರಕ್ಷಿಸುತ್ತದೆ.”

– ಸಾಕಷ್ಟು ನೀರು ಕುಡಿಯಿರಿ:

ನಮ್ಮ ಕಣ್ಣಿನ ಆರೋಗ್ಯದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುವ ನಿರ್ಜಲೀಕರಣವನ್ನು ತಪ್ಪಿಸಲು ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.

– ದೇಹದ ತೂಕ ಕಡಿಮೆ ಮಾಡಿ:

ಬೊಜ್ಜು ನಮ್ಮ ಕಣ್ಣಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಕಣ್ಣಿನೊಳಗಿನ ಒತ್ತಡವನ್ನು ಹೆಚ್ಚಿಸಬಹುದು. ಆದ್ದರಿಂದ, ಆರೋಗ್ಯಯುತ ಜೀವನಕ್ಕಾಗಿ ತೂಕ ಕಡಿಮೆ ಮಾಡಿ. ಇದಕ್ಕಾಗಿ ಆರೋಗ್ಯಕರ ಆಹಾರವನ್ನು ಅಳವಡಿಸಿಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಾರೆ.

– ಧೂಮಪಾನಕ್ಕೆ ಹೇಳಿ ಗುಡ್ ಬೈ:

ಧೂಮಪಾನವು ದೃಷ್ಟಿಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಅದಲ್ಲದೆ, ಧೂಮಪಾನಿಗಳಲ್ಲದವರಿಗೆ ಹೋಲಿಸಿದರೆ ಧೂಮಪಾನಿಗಳಿಗೆ ಕಣ್ಣಿನ ಪೊರೆಯಂತಹ ಸಮಸ್ಯೆಗಳು ಎರಡು ಅಥವಾ ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯು ಸೂಚಿಸುತ್ತದೆ.

ಆರೋಗ್ಯಕರ ಆಹಾರ ಪದ್ಧತಿಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ, ದೀರ್ಘಕಾಲದವರೆಗೆ ಆರೋಗ್ಯವಾಗಿರಲು ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ನೀಡಬೇಕು ಎಂದು ತಜ್ಞರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...