alex Certify ಸೌದಿ ದೊರೆಯ 2,254 ಕೋಟಿ ರೂಪಾಯಿ ಬೆಲೆಯ ವಿಮಾನ ಗುಜರಿಗೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೌದಿ ದೊರೆಯ 2,254 ಕೋಟಿ ರೂಪಾಯಿ ಬೆಲೆಯ ವಿಮಾನ ಗುಜರಿಗೆ..!

2,254 ಕೋಟಿ ರೂಪಾಯಿ ಮೌಲ್ಯದ ಸೌದಿ ದೊರೆಯ ಬೋಯಿಂಗ್ 747 ಐಶಾರಾಮಿ ವಿಮಾನ ಇದೀಗ ಗುಜರಿಗೆ ಹೋಗಲು ಸಿದ್ಧವಾಗಿದೆ. ಕಳೆದ 10 ವರ್ಷಗಳಿಂದ ಬಳಸದೇ ಬಿಟ್ಟಿದ್ದ ಈ ವಿಮಾನವನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ.

ಸೌದಿ ಅರೇಬಿಯಾದ ರಾಜಕುಮಾರರಾಗಿದ್ದ ಸುಲ್ತಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರು ಈ ವಿಮಾನವನ್ನು ಖರೀದಿಸಿದ್ದು, 2012 ರಲ್ಲಿ ಅವರಿಗೆ ಹಸ್ತಾಂತರ ಮಾಡಬೇಕಿತ್ತು. ಆದರೆ, ಅಷ್ಟರ ವೇಳೆಗೆ ಅವರು ಸಾವನ್ನಪ್ಪಿದ್ದರಿಂದ ವಿಮಾನದ ಹಾರಾಟವೇ ನಡೆದಿರಲಿಲ್ಲ. ಈ ಐಶಾರಾಮಿ ವಿಮಾನ ಇದುವರೆಗೆ ಪರೀಕ್ಷಾರ್ಥ ಹಾರಾಟ ಸೇರಿದಂತೆ ಒಟ್ಟು ಕೇವಲ 42 ಗಂಟೆ ಕಾಲ ಹಾರಾಟ ನಡೆಸಿದೆ.

ಪ್ರೇಮ ವಿವಾಹ ದುರಂತದಲ್ಲಿ ಅಂತ್ಯ; ಕ್ಯಾಮೆರಾದಲ್ಲಿ ಸೆರೆಯಾಯ್ತು ಬರ್ಬರ ಹತ್ಯೆ

ಮೇಲ್ ಆನ್ ಲೈನ್ ವರದಿ ಪ್ರಕಾರ, ವಿಐಪಿ ಇಂಟೀರಿಯರ್ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡಿತ್ತು. ಆದರೆ, ಈ ವಿಮಾನ ಹಸ್ತಾಂತರವಾಗದೇ ಉಳಿದಿತ್ತು. ರಾಜಕುಮಾರನ ಸಾವಿನ ನಂತರ ವಿಮಾನದ ಕಡೆಗೆ ಯಾರೂ ಗಮನ ಹರಿಸದ ಕಾರಣ ಅದು ಧೂಳಿಡಿದಿತ್ತು.

ಸಾಮಾನ್ಯವಾಗಿ ಈ ವಿಮಾನ 1,00,000 ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ಗುಜರಿಗೆ ಹಾಕಬೇಕಿತ್ತು. ಆದರೆ, ಕೇವಲ 42 ಗಂಟೆಗಳ ಕಾಲ ಹಾರಾಟ ನಡೆಸಿರುವ ಈ ವಿಮಾನವನ್ನು ರಾಜಕುಮಾರನ ಕುಟುಂಬ ಸದಸ್ಯರು ಪಡೆಯದೇ ಇದ್ದುದರಿಂದ ದಶಕದಷ್ಟು ಅವಧಿವರೆಗೆ ಹಾಗೇ ಬಿಟ್ಟಿದ್ದರಿಂದ ಹಾಳಾಗುತ್ತಾ ಬಂದಿದೆ.

ಇದೀಗ ಯುಎಸ್ ನ ಆರಿಝೋನಾದ ಪಿನಾಲ್ ಏರ್ ಪಾರ್ಕ್ ಎಂಬ ವಿಶ್ವಖ್ಯಾತಿಯ ಏರ್ ಪ್ಲೇನ್ ಬೋನ್ ಯಾರ್ಡ್ ಕಂಪನಿ ಈ ವಿಮಾನವನ್ನು ಖರೀದಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...