alex Certify ಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು?: ಸಚಿವ ಸಂತೋಷ್ ಲಾಡ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿ20 ಸಮಾವೇಶಕ್ಕೆ 4200 ಕೋಟಿ ರೂ. ಖರ್ಚು ಮಾಡಿ ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು?: ಸಚಿವ ಸಂತೋಷ್ ಲಾಡ್

ಬಾಗಲಕೋಟೆ: 2000 ರೂ. ನೋಟು ಹಿಂಪಡೆದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಅವರು, 100 ಸ್ಮಾರ್ಟ್ ಸಿಟಿ ಘೋಷಣೆ ಮಾಡಿದ್ದರ ಬಗ್ಗೆಯೂ ಮೋದಿ ಮಾತನಾಡಬೇಕು. ಜಿ20 ಕಾರ್ಯಕ್ರಮದ ಬಜೆಟ್ 900 ಕೋಟಿ ರೂ.ನಿಂದ 4200 ಕೋಟಿ ರೂ.ಗೆ ಏರಿಕೆಯಾಗಿದೆ. ಬೇರೆ ದೇಶಗಳಲ್ಲಿ 120 ಕೋಟಿ ರೂ.ನಲ್ಲಿ ಜಿ20 ಕಾರ್ಯಕ್ರಮ ಮಾಡಿದ್ದಾರೆ. ಫ್ರಾನ್ಸ್ ನಲ್ಲಿ 700 ಕೋಟಿ ರೂಪಾಯಿ ವೆಚ್ಚದಲ್ಲಿ ಜಿ20 ಕಾರ್ಯಕ್ರಮ ಮಾಡಿದ್ದಾರೆ. ನಮ್ಮಲ್ಲಿ 4200 ಕೋಟಿ ರೂ ಖರ್ಚು ಮಾಡಿ ಜಿ20 ಕಾರ್ಯಕ್ರಮ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮೀಟರ್ ಗೆ ಒಂದು ನರೇಂದ್ರ ಮೋದಿ ಸಾಹೇಬರ ಫೋಟೋ ಹಾಕಿದ್ದಾರೆ. ಚಿನ್ನ, ಬೆಳ್ಳಿ ತಟ್ಟೆಯಲ್ಲಿ ತಿನ್ನಿಸಿದ್ದರಿಂದ ನಮಗಾದ ಪ್ರಯೋಜನವೇನು? ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾದಿಂದ ಏನು ಲಾಭವಾಗಿದೆ? ಮೋದಿ ಸರ್ಕಾರ ಒಂದು ಸೂಜಿಯನ್ನಾದರೂ ಉತ್ಪಾದನೆ ಮಾಡಿದ್ದಾರಾ ಎಂದು ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...