alex Certify ಸಪ್ನಾ ಚೌಧರಿಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಪ್ನಾ ಚೌಧರಿಯ ಮತ್ತೊಂದು ಡಾನ್ಸ್ ವಿಡಿಯೋ ವೈರಲ್

ಬಿಗ್ ಬಾಸ್ ಖ್ಯಾತಿಯ ಹರಿಯಾಣವಿ ಡ್ಯಾನ್ಸರ್ ಸಪ್ನಾ ಚೌಧರಿ ಇನ್ ಸ್ಟಾದಲ್ಲಿ‌ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಸಪ್ನಾ ಚೌಧರಿಯವರ ನೃತ್ಯ ಪ್ರದರ್ಶನಗಳು ಹುಚ್ಚೆಬ್ಬಿಸಿವೆ. ಆಕೆಯ ಹಾಡುಗಳನ್ನು ಕೇಳುತ್ತಾ ಪ್ರೇಕ್ಷಕರು ಮೈಮರೆತುಬಿಡುತ್ತಾರೆ.

ಇದಕ್ಕೊಂದು ಉದಾಹರಣೆ ಎಂದರೆ ಕಾರ್ಯಕ್ರಮವೊಂದರಲ್ಲಿ ಸಪ್ನಾ ವೇದಿಕೆಯ ಮೇಲೆ ಕುಣಿಯುತ್ತಿದ್ದಂತೆಯೇ ಪ್ರೇಕ್ಷಕರ ಸಾಲಿನಲ್ಲಿದ್ದ ಒಬ್ಬ ಹಿರಿಯ ವ್ಯಕ್ತಿ ಕೂಡ ಕುಣಿಯಲು ಆರಂಭಿಸಿದ್ದರು.

ಅದರ ವಿಡಿಯೋ ವನ್ನು ಸಪ್ನಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ ನಲ್ಲಿ ಹಂಚಿಕೊಂಡಿದ್ದು, ಅದು ಭರ್ಜರಿ ವೈರಲ್ ಆಗುತ್ತಿದೆ. ಅಲ್ಲಿ ಸಪ್ನಾ ಅವರು ತಮ್ಮ ಹೊಸ ಹರ್ಯಾಣವಿ ಹಾಡಿಗೆ ನೃತ್ಯ ಮಾಡುವುದನ್ನು ಕಾಣಬಹುದು.

ಮೀನಾಕ್ಷಿ ಪಾಂಚಾಲ್ ಹಾಡಿರುವ ಸಪ್ನಾ ಚೌಧರಿಯವರ ಕಾಮಿನಿ ಹಾಡಿನ ಅಧಿಕೃತ ಮ್ಯೂಸಿಕ್ ವಿಡಿಯೋ ಜುಲೈ 25ರಂದು ಬಿಡುಗಡೆಯಾಗಿದೆ. ಇದು ಯೂಟ್ಯೂಬ್‌ನಲ್ಲಿ 5.3 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.

ಅವರ ಇತ್ತೀಚಿನ ರೀಲ್‌ ಕೂಡ ಅಭಿಮಾನಿಗಳ‌ ಮನ ಗೆದ್ದಿದೆ. ಲೆಹೆಂಗಾವನ್ನು ತೊಟ್ಟಿದ್ದ ಅವರು ತಮ್ಮ ಸಿಗ್ನೇಚರ್ ಸ್ಟೆಪ್‌ಗಳೊಂದಿಗೆ ಹಾಡಿಗೆ ಕುಣಿಯುತ್ತಾರೆ. ಸಪ್ನಾ ಅವರು ಕಾಮಿನಿಯ ಮ್ಯೂಸಿಕ್ ವಿಡಿಯೋದಲ್ಲಿ ಬಳಸಿದ ನೃತ್ಯದ ಹೆಜ್ಜೆಗಳನ್ನು ಇಲ್ಲಿ ಪುನರಾವರ್ತಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...