alex Certify ಇಂದು ಬಿಡುಗಡೆಯಾಗಲಿದೆ ಸಮಂತಾ ನಟನೆಯ ‘ಯಶೋಧ’ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು ಬಿಡುಗಡೆಯಾಗಲಿದೆ ಸಮಂತಾ ನಟನೆಯ ‘ಯಶೋಧ’ ಟೀಸರ್

ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಬಿಡುಗಡೆಗೆ ಸಿದ್ಧವಾಗಿದ್ದು,  ಇಂದು ಈ ಚಿತ್ರದ ಟೀಸರ್ ಅನ್ನು  ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ತಮಿಳು, ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಮಾಡಲಿದ್ದಾರೆ. ಈ ಕುರಿತು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಶ್ರೀದೇವಿ ಮೂವೀಸ್ ಬ್ಯಾನರ್ ನಡಿ ಶಿವಲೆಂಕ ಕೃಷ್ಣಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಮಣಿಶರ್ಮ ಸಂಗೀತ ಸಂಯೋಜನೆ ಮಾಡಿದ್ದಾರೆ. ಯಶೋಧ ಎಂಬ ಮಹಿಳೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಉನ್ನಿ ಮುಕುಂದನ್, ವರಲಕ್ಷ್ಮೀ ಶರತ್ ಕುಮಾರ್, ಮುರಳಿ ಶರ್ಮಾ, ರಾವ್ ರಮೇಶ್, ಪ್ರಿಯಾಂಕಾ ಶರ್ಮಾ, ಸಂಪತ್ ರಾಜ್, ಕಲ್ಪಿಕ ಗಣೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...