alex Certify ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಷ್ಪಾ ಚಿತ್ರದ ನಟನೆಗಾಗಿ ಅಲ್ಲು ಅರ್ಜುನ್‌ರನ್ನು ಹಾಡಿ ಹೊಗಳಿದ ಸಮಂತಾ

ಟಾಲಿವುಡ್ ನಟ ಅಲ್ಲು ಅರ್ಜುನ್‌ರ ಪುಷ್ಪ ಚಿತ್ರದ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿರುವ ನಟಿ ಸಮಂತಾ ರುತ್‌ ಪ್ರಭು, ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ನಾಯಕನ ಬಗ್ಗೆ ಹಾಡಿ ಹೊಗಳಿದ್ದಾರೆ.

ಪುಷ್ಪ ಚಿತ್ರದಲ್ಲಿ ಅಲ್ಲು ಅರ್ಜುನ್‌ರ ಪಾತ್ರವನ್ನು ಮೆಚ್ಚಿ ಪೋಸ್ಟ್ ಮಾಡಿರುವ ಸಮಂತಾ, “ಇದು ಅಲ್ಲು ಅರ್ಜುನ್‌ರನ್ನು ಮೆಚ್ಚಿ ಹಾಕುತ್ತಿರುವ ಪೋಸ್ಟ್! ನಿಮ್ಮನ್ನು ಹಿಡಿದಿಟ್ಟು ಕೂರಿಸುವ ಪ್ರದರ್ಶನ…. ಪ್ರತಿ ಸೆಕೆಂಡ್ ಸಹ ಬೆಂಕಿ. ನೋಡದೇ ಇರಲು ಸಾಧ್ಯವೇ ಇರದ ಮಟ್ಟಿಗೆ ಅಸಾಧ್ಯವಾಗುವ ಮಟ್ಟದಲ್ಲಿ ನಟರೊಬ್ಬರು ಇರುವುದನ್ನು ನೋಡಿ ನನಗೆ ಯಾವಾಗಲೂ ಸ್ಪೂರ್ತಿಯಾಗುತ್ತದೆ. ಮಾತುಗಾರಿಕೆಯಿಂದ ತೋಳನ್ನು ಒಂದು ಕಡೆ ಇಳಿಬಿಟ್ಟಿರುವವರೆಗೂ ಮತ್ತು ಆ ಅದ್ಭುತ ಸ್ವಾಗ್, ನಿಜಕ್ಕೂ ಮನೋಹರ.. ನಿಜಕ್ಕೂ ನಿಜಕ್ಕೂ ಸ್ಪೂರ್ತಿಯುತವಾಗಿದೆ,” ಎಂದು ಹೇಳಿಕೊಂಡಿದ್ದಾರೆ.

BIG NEWS: ಕನ್ನಡ ಪರ ಸಂಘಟನೆ ಕಾರ್ಯಕರ್ತರು ಪೊಲೀಸರ ವಶಕ್ಕೆ; ಕರ್ನಾಟಕವೇ ಬಂದ್ ಆಗುತ್ತೆ ಹುಷಾರ್…! ಎಚ್ಚರಿಕೆ ನೀಡಿದ ಪ್ರವೀಣ್ ಶಟ್ಟಿ

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದು, ಮಲಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್ ಸಹ ಇದ್ದಾರೆ. ಚಿತ್ರವು ಏಕಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಬಿಡುಗಡೆಯಾಗಿದೆ.

ಚಿತ್ರದಲ್ಲಿ ಐಟಂ ಸಾಂಗ್ ’ಊ ಅಂಟಾವಾ.. ಊ ಊ ಅಂಟಾವಾ’ಗೆ ಸಮಂತಾ ಕುಣಿದಿದ್ದಾರೆ. ಈ ಹಾಡಿನ ಲಿರಿಕಲ್ ವಿಡಿಯೋಗೆ ಬರೀ ಏಳೇ ದಿನಗಳಲ್ಲಿ 3.8 ಕೋಟಿ ವೀಕ್ಷಣೆಗಳು ಸಿಕ್ಕಿವೆ. ಚೆನ್ನೈನಲ್ಲಿರುವ ಸಮಂತಾ ಅಭಿಮಾನಿಗಳು ಆಕೆಗಾಗಿಯೇ ಪುಷ್ಪ ಚಿತ್ರ ಬಿಡುಗಡೆಯಾದ ಚಿತ್ರಮಂದಿರಗಳಲ್ಲಿ ನೆರೆದಿದ್ದಾರೆ.

https://www.instagram.com/p/CXq08CzB1JG/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...