alex Certify ‌ಡೂಪ್ಲಿಕೇಟ್‌ ಸಲ್ಮಾನ್ ಖಾನ್‌ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ಡೂಪ್ಲಿಕೇಟ್‌ ಸಲ್ಮಾನ್ ಖಾನ್‌ ಅರೆಸ್ಟ್

ಸಾಮಾಜಿಕ ಮಾಧ್ಯಮದ ಸ್ಟಾರ್‌, ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ ಖ್ಯಾತಿಯ ಡೊಪ್ಪಲ್‌ ಗ್ಯಾಂಗರ್‌ ಆಜಮ್‌ ಅನ್ಸಾರಿ ನನ್ನು ಲಖನೌ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕ ಸಂಚಾರ ಅಸ್ತವ್ಯಸ್ತಗೊಳಿಸಿದ ಆರೋಪ ಆಜಮ್‌ ಅನ್ಸಾರಿ ಮೇಲಿದೆ.

ಸಂಚಾರ ದಟ್ಟಣೆ ಇರುವ ರಸ್ತೆಯಲ್ಲಿ ರೀಲ್‌ಗಾಗಿ ಚಿತ್ರೀಕರಣ ನಡೆಸಿದ ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌, ಸಂಚಾರ ವ್ಯವಸ್ಥೆಗೆ ಅಡ್ಡಿ ಉಂಟುಮಾಡಿದ್ದರು. ಹೀಗಾಗಿ, ನಿಯಮ ಉಲ್ಲಂಘನೆ ಆರೋಪದಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೆಲವು ವಾಹನ ಪ್ರಯಾಣಿಕರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಠಾಕೂರ್‌ ಗಂಜ್‌ ಠಾಣೆಯಲ್ಲಿ ಸೆಕ್ಷನ್‌ 151ರ ಪ್ರಕಾರ ಎಫ್‌ಐಆರ್‌ ದಾಖಲಾಗಿದೆ. ಲಖನೌನ ಐತಿಹಾಸಿಕ ಕ್ಲಾಕ್‌ ಟವರ್‌ ಸಮೀಪ ರೀಲ್‌ ವಿಡಿಯೋ ಚಿತ್ರೀಕರಣ ನಡೆಸಿದ್ದರು. ಡೂಪ್ಲಿಕೇಟ್‌ ಸಲ್ಮಾನ್‌ ಖಾನ್‌ನನ್ನು ನೋಡಲು ಅಲ್ಲಿ ಭಾರಿ ಜನಸಮೂಹ ಸೇರಿತ್ತು. ಇದರಿಂದಾಗಿ ಟ್ರಾಫಿಕ್‌ ಜಾಮ್‌ ಕೂಡ ಆಗಿತ್ತು.

ನಿರ್ಮಲಾ ಸೀತಾರಾಮನ್‌ ಅವರ ಸರಳತೆಗೆ ತಲೆದೂಗಿದ ನೆಟ್ಟಿಗರು

ಇನ್‌ಸ್ಟಾಗ್ರಾಮ್‌ ಮತ್ತು ರೀಲ್‌ಗಾಗಿ ಲಖನೌ ರಸ್ತೆ ಮತ್ತು ಸ್ಮಾರಕಗಳಲ್ಲಿ ಅನ್ಸಾರಿ ವಿಡಿಯೋ ಚಿತ್ರೀಕರಣ ಮಾಡುತ್ತಿರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 77 ಸಾವಿರಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಯೂಟ್ಯೂಬ್‌ನಲ್ಲಿ 1.67 ಲಕ್ಷ ಫಾಲೋಯರ್‌ಗಳನ್ನು ಹೊಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...