alex Certify BIG NEWS: ಶಿಕ್ಷಕರಿಗೆ NPS ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹ; ಶಾಸಕರ ವೇತನ, ಪೆನ್ಷನ್ ಬಗ್ಗೆ ಪರಿಷತ್ ನಲ್ಲಿ ಭಾರೀ ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಶಿಕ್ಷಕರಿಗೆ NPS ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹ; ಶಾಸಕರ ವೇತನ, ಪೆನ್ಷನ್ ಬಗ್ಗೆ ಪರಿಷತ್ ನಲ್ಲಿ ಭಾರೀ ಚರ್ಚೆ

ಬೆಂಗಳೂರು: ಶಿಕ್ಷಕ ಸಮುದಾಯಕ್ಕೆ ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮತ್ತೆ ಜಾರಿ ಮಾಡಬೇಕು ಎಂದು ವಿಧಾನ ಪರಿಷತ್ ನಲ್ಲಿ ಜೆಡಿಎಸ್ ಸದಸ್ಯ ಬೋಜೇಗೌಡ ಹೇಳಿದ್ದಾರೆ.

ಸಚಿವರು, ಶಾಸಕರ ವೇತನ ಹೆಚ್ಚಳ ಆಗಬೇಕಾದರೆ ಚರ್ಚೆ ಆಗುವುದಿಲ್ಲ. ನಮ್ಮದು ಬಂದರೆ ಚರ್ಚೆ ಮಾಡುತ್ತಿರಾ ಎಂದು ಹೊರಗೆ ಕೇಳ್ತಾರೆ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯೆ ತೇಜಸ್ವಿನಿ ಅವರು, ಸದನದಲ್ಲಿ ಉಳ್ಳವರು ಇದ್ದಾರೆ. ಇಲ್ಲದೆ ಇರುವವರು ಇದ್ದಾರೆ. ನಾವು ಇದೇ ಸಂಬಳ ನೆಚ್ಚಿಕೊಂಡಿರುವವರು ಎಂದು ಹೇಳಿದ್ದಾರೆ. ಸ್ಥಿತಿವಂತರು ನಮಗೆ ಸಂಬಳ ಬೇಡವೆಂದು ಬರೆದುಕೊಟ್ಟು ಬಿಡಿ, ನಾವು ಸಂಬಳದಲ್ಲಿ ಬದುಕಿರುವವರು. ನಮಗೆ ಗಿಂಬಳ ಗೊತ್ತಿಲ್ಲ. ಹೀಗಾಗಿ ಶಾಸಕರ ವೇತನ ಹೆಚ್ಚಳದ ಬಗ್ಗೆ ಚರ್ಚೆಯಾಗಲಿ ಎಂದು ವಿಧಾನಪರಿಷತ್ ನಲ್ಲಿ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.

ಶಾಸಕರಿಗೆ ಪಿಂಚಣಿ ವ್ಯವಸ್ಥೆ ಹೇಗೆ ಬಂತೆಂದು ಕೂಡ ವಿಶ್ವನಾಥ್ ತಿಳಿಸಿದ್ದಾರೆ. 1978 ರಲ್ಲಿ ನಮಗೆ 500 ರೂಪಾಯಿ ಸಂಬಳ ಬರುತ್ತಿತ್ತು. ಅಂದಿನ ಕಾಲದಲ್ಲಿ ಶಾಸಕರಿಗೆ ಪಿಂಚಣಿ ವ್ಯವಸ್ಥೆ ಇರಲಿಲ್ಲ. ದೇವರಾಜ ಅರಸು ಅವರು ನಮಗೆ ಹೇಳಿ ಬಿಲ್ ಮಾಡಿಸಿದರು. ನಾನು, ಟಿ.ಬಿ. ಜಯಚಂದ್ರ, ಕಡಿದಾಳ್ ಮಂಜಪ್ಪ ಸೇರಿಕೊಂಡು ಬಿಲ್ ಜಾರಿಗೊಳಿಸಿದೆವು. ನಮಗೆ 350 ರೂ. ಪಿಂಚಣಿ ಕೊಟ್ಟರು. ಈಗ ಶಾಸಕರ ವೇತನ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗಿನ ಘಟನೆಯ ವಿವರಣೆ ನೀಡಿದರು.

ಪರಿಷತ್ ಗೆ ಬರುವ ಸಿರಿವಂತರು ಸಂಬಳ ಬಿಟ್ಟುಕೊಡಿ, ನಾವು ಬಡವರು ಸಂಬಳದಿಂದಲೇ ಜೀವನ ಸಾಗಿಸುವವರು. ನನಗೆ ವೇತನ ಅಗತ್ಯವಿದೆಯೆಂದು ಬಿಜೆಪಿ ಸದಸ್ಯೆ ತೇಜಸ್ವಿನಿ ಹೇಳಿದ್ದಾರೆ. ಬಜೆಟ್ ಮೇಲೆ ಚರ್ಚೆಯ ವೇಳೆ ವೇತನ ಹೆಚ್ಚಳದ ಬಗ್ಗೆ ಹೊರಗೆ ಟೀಕೆ ಮಾಡುತ್ತಿದ್ದಾರೆ ಎಂದಿದ್ದಕ್ಕೆ ಮಧ್ಯಪ್ರವೇಶಿಸಿ ಅವರು ಮಾತನಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...