alex Certify BIG NEWS : ಪ್ರಯಾಣಿಕರ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ‘KSRTC’ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS : ಪ್ರಯಾಣಿಕರ ಸುರಕ್ಷತೆಗೆ ಈ ನಿಯಮಗಳ ಪಾಲನೆ ಕಡ್ಡಾಯ : ‘KSRTC’ ಆದೇಶ

ಬೆಂಗಳೂರು : ಬಸ್ ನಿಂದ ಬಿದ್ದು ಬಾಲಕಿ ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ( KSRTC)  ಪ್ರಯಾಣಿಕರ ಸುರಕ್ಷತೆಗೆ ಹಲವು ಮುಂಜಾಗೃತಾ ಕ್ರಮ ವಹಿಸಲು ಆದೇಶ ಹೊರಡಿಸಿದೆ. ಸಿಬ್ಬಂದಿಗಳಿಗೆ ಈ ಮುಂಜಾಗೃತಾ ಕ್ರಮ ಕೈಗೊಳ್ಳಲು ಸೂಚನೆ ನೀಡಿದೆ.

ವಾ.ಕ.ರ.ಸಾ ಸಂಸ್ಥೆಯ ಹಾವೇರಿ ವಿಭಾಗದ ಹಾನಗಲ್ ಘಟಕದ ಬಸ್ ಕಾರ್ಯಾಚರಣೆಯಲ್ಲಿರುವಾಗ ಓರ್ವ ವಿದ್ಯಾರ್ಥಿನಿಯು ವಾಹನದಿಂದ ಕೆಳಗೆ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿ ಮೃತಪಟ್ಟಿರುವಂತಹ ದುರಾದೃಷ್ಟಕರ ಘಟನೆಯು ವರದಿಯಾಗಿರುತ್ತದೆ. ಈ ಬಗ್ಗೆ ಸಾರಿಗೆ ಮತ್ತು ಮುಜರಾಯಿ ಸಚಿವರು ತೀವು ವಿಷಾದವನ್ನು ವ್ಯಕ್ತಪಡಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಅವಘಡಗಳು ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ನಡೆಯದಂತ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳಲು ಸೂಚಿಸಿರುತ್ತಾರೆ, ಅದರಂತೆ, ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಚಾಲನಾ ಸಿಬ್ಬಂದಿಗಳಿಗೆ ಈ ಕೆಳಕಂಡಂತೆ ಸೂಕ್ತ ನಿರ್ದೇಶನಗಳನ್ನು ನೀಡಲು ಸೂಚಿಸಲಾಗಿದೆ.

1) ಚಾಲನಾ ಸಿಬ್ಬಂದಿಗಳು ವಾಹನವನ್ನು ಘಟಕದಿಂದ ಕಾರ್ಯಾಚರಣೆಗೆ ತೆಗೆದುಕೊಂಡು ಹೋಗುವ ಮೊದಲು ವಾಹನದ ಬಾಗಿಲುಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

2) ಪ್ರತಿಯೊಂದು ಬಸ್ ನಿಲ್ದಾಣಗಳಲ್ಲಿ ವಾಹನದ ನಿರ್ವಾಹಕರು ವಾಹನದ ಹಿಂದಿನ ಬಾಗಿಲನ್ನುಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು, ಚಾಲಕರಿಗೆ ಸೂಚನೆ ನೀಡಿದ ನಂತರವೇ ಚಾಲಕರುವಾಹನವನ್ನು ಚಾಲನೆ ಮಾಡುವುದು.

3)  ವಾಹನದ ಫುಟ್ಬೋರ್ಡ್ ನಲ್ಲಿ ಪಯಾಣಿಕರು ನಿಂತು ಪ್ರಯಾಣಿಸಲು ಅವಕಾಶ ನೀಡದಂತೆ ಕ್ರಮಕ್ರಗೊಳ್ಳುವುದು

4) ಚಾಲಕರು ವಾಹನದ ಮುಂದಿನ/ಹಿಂದಿನ ಬಾಗಿಲನ್ನು ಮುಚ್ಚಿರುವ ಬಗ್ಗೆ ಖಾತ್ರಿಪಡಿಸಿಕೊಂಡು ವಾಹನ ಚಾಲನ ಮಾಡುವುದು.

5) ಬಸ್ ನಿಲ್ದಾಣ ತಲುಪುವ ಮುಂಚೆ ವಾಹನದ ಬಾಗಿಲನ್ನು ತೆರೆಯದ ಬಸ್ ನಿಲ್ದಾಣ/ನಿಲುಗಡ ಸ್ಥಳದಲ್ಲಿ ಬಸ್ ನಿಲ್ಲಿಸಿದ ನಂತರ ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಇಳಿಸುವುದು.ಮುಂದುವರೆದು, ಪುಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ಮೇಲಿನ ಕ್ರಮಗಳನ್ನು ಕಟ್ಟುನಿಟ್ಟಾಗಿಪಾಲಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಸುತ್ತೋಲೆ ಹೊರಡಿಸಿದ್ದಾರೆ.

 

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...