alex Certify ಎಲಿವೇಟರ್ ಅವಘಡದಿಂದ ಕೂದಲೆಳೆ ಅಂತರದಲ್ಲಿ ಉಳಿಯಿತು ಈ ವ್ಯಕ್ತಿ ಪ್ರಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲಿವೇಟರ್ ಅವಘಡದಿಂದ ಕೂದಲೆಳೆ ಅಂತರದಲ್ಲಿ ಉಳಿಯಿತು ಈ ವ್ಯಕ್ತಿ ಪ್ರಾಣ

Russian man escapes grave injury after almost getting stuck in dysfunctional  lift. Watch - India Todayಎಲೆವೇಟರ್​ ಒಂದು ಅಸಮರ್ಪಕ ಕಾರ್ಯನಿರ್ವಹಣೆಯಿಂದ ವ್ಯಕ್ತಿಯೊಬ್ಬ ತಲೆಯನ್ನೇ ಕಳೆದುಕೊಳ್ಳುವ ಸಂದರ್ಭ ಎದುರಾಗಿತ್ತು. ಆತನ ಲಕ್​ ಎಷ್ಟು ಚೆನ್ನಾಗಿತ್ತೆಂದರೆ ಕೂದಲೆಳೆ ಅಂತರದಲ್ಲಿ ಆತನ ತನ್ನ ತಲೆ ಉಳಿಸಿಕೊಂಡಿದ್ದಾನೆ.

ರಷ್ಯಾದ ಕ್ರಾಸ್ನೋಡರ್​ ನಗರದ ಅಪಾರ್ಟ್​ಮೆಂಟ್​ ಬ್ಲಾಕ್​ನಲ್ಲಿ ಈ ಘಟನೆ ನಡೆದಿದೆ. ಮೈ ಝುಮ್ಮೆನಿಸುವ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೀಡಿಯೋದಲ್ಲಿ ವ್ಯಕ್ತಿಯೊಬ್ಬ ಲಿಫ್ಟ್​ನಿಂದ ಹೊರಬರುತ್ತಿರುವುದು ಕಂಡುಬರುತ್ತದೆ. ಅಲ್ಲಿಯವರೆಗೆ, ಲಿಫ್ಟ್​ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ತೋರುತ್ತದೆ. ಆದರೆ ಇನ್ನೊಬ್ಬ ವ್ಯಕ್ತಿ ಲಿಫ್ಟ್​ ಒಳಗೆ ಹೆಜ್ಜೆ ಹಾಕಲು ಪ್ರಯತ್ನಿಸಿದಾಗ, ಆ ವ್ಯಕ್ತಿ ಇನ್ನೂ ಬಾಗಿಲಿನ ನಡುವೆ ಇರುವಾಗಲೇ ಲಿಫ್ಟ್​ ವೇಗವಾಗಿ ಕೆಳಕ್ಕೆ ಚಲಿಸಿತು.

ಆ ವ್ಯಕ್ತಿ ಲಿಫ್ಟ್‌ ಒಳಗೆ ಹೋಗುತ್ತಿರುವಾಗ ತನ್ನ ಫೋನ್​ ಅನ್ನು ನೋಡುತ್ತಿರುವುದು ಸಿಸಿ ಟಿವಿ ಫೂಟೇಜ್​ನಲ್ಲಿ ಕಾಣಿಸುತ್ತದೆ. ಆತ ಅವಸರದಿಂದ ಹಿಂದಕ್ಕೆ ಚಲಿಸಿದ್ದು ತನ್ನ ತಲೆಯನ್ನು ಉಳಿಸಿಕೊಂಡಿದ್ದಾನೆ. ನೆಟ್ಟಿಗರು ಇದನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...