alex Certify BIG NEWS: ಅಮೆಜಾನ್ ಕಂಪನಿಯನ್ನು ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಕರೆದ ಆರ್.ಎಸ್.ಎಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆಜಾನ್ ಕಂಪನಿಯನ್ನು ‘ಈಸ್ಟ್ ಇಂಡಿಯಾ ಕಂಪನಿ 2.0’ ಎಂದು ಕರೆದ ಆರ್.ಎಸ್.ಎಸ್

ಮುಂಬೈ: ಆರ್.ಎಸ್.ಎಸ್. ಮುಖವಾಣಿ ಪಾಂಚಜನ್ಯ ಪತ್ರಿಕೆಯಲ್ಲಿ ಅಮೆಜಾನ್ ಕಂಪನಿ ವಿರುದ್ಧ ಕಿಡಿ ಕಾರಲಾಗಿದ್ದು, ‘ಈಸ್ಟ್ ಇಂಡಿಯಾ ಕಂಪನಿ 2.0’ಗೆ ಹೋಲಿಕೆ ಮಾಡಲಾಗಿದೆ.

ಅಕ್ಟೋಬರ್ 3ರಂದು ಮಾರುಕಟ್ಟೆಗೆ ಬರಲಿರುವ ಸಂಚಿಕೆಯಲ್ಲಿ ವಿಶೇಷ ಲೇಖನ ಪ್ರಕಟಿಸಲಾಗಿದ್ದು, ಅಮೆಜಾನ್ ಪ್ರೈಮ್ ನಲ್ಲಿ ಭಾರತದ ಸಂಸ್ಕೃತಿಗೆ ವಿರುದ್ಧವಾದ ಚಲನಚಿತ್ರಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ.

ಅಲ್ಲದೇ ಭಾರತೀಯ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಸಾಧಿಸಲು ಅಮೆಜಾನ್ ಯತ್ನಿಸುತ್ತಿದೆ. 18ನೇ ಶತಮಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ಭಾರತ ಆಕ್ರಮಿಸಿಕೊಳ್ಳಲು ಮಾಡಿದ ಪ್ರಯತ್ನವನ್ನೇ ಇದೀಗ ಅಮೆಜಾನ್ ಕಂಪನಿ ಮಾಡುತ್ತಿದೆ. ಭಾರತದಲ್ಲಿ ತನಗೆ ಅನುಕೂಲಕರವಾದ ನೀತಿಗಳನ್ನು ರೂಪಿಸಿಕೊಳ್ಳಲು ಅಮೆಜಾನ್ ಕೋಟ್ಯಂತರ ರೂಪಾಯಿ ಲಂಚ ನೀಡಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್ ವಿರುದ್ಧ ತನಿಖೆ ನಡೆಯಬೇಕು ಎಂದು ಪಾಂಚಜನ್ಯದಲ್ಲಿ ಆಗ್ರಹಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...