alex Certify ಮತ್ತಷ್ಟು ದುಬಾರಿಯಾದ ರಾಯಲ್ ಎನ್ಫೀಲ್ಡ್; ಕ್ಲಾಸಿಕ್ 350 ಸೇರಿದಂತೆ ನಾಲ್ಕು ಬೈಕ್ ಗಳ ದರ ಏರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತಷ್ಟು ದುಬಾರಿಯಾದ ರಾಯಲ್ ಎನ್ಫೀಲ್ಡ್; ಕ್ಲಾಸಿಕ್ 350 ಸೇರಿದಂತೆ ನಾಲ್ಕು ಬೈಕ್ ಗಳ ದರ ಏರಿಕೆ

Royal Enfield Classic 350, Bullet 350, Meteor 350, others: Domestic  wholesales rise 84 per cent in March 2021 - Auto Newsರಾಯಲ್ ಎನ್ಫೀಲ್ಡ್ ಮತ್ತೊಮ್ಮೆ ತಮ್ಮ ನಾಲ್ಕು ಬೈಕ್ ಗಳ ಬೆಲೆಯನ್ನ ಹೆಚ್ಚಿಸಿದೆ. 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಬೈಕ್ ಗಳ ಬೆಲೆ ಹೆಚ್ಚಿಸಿದ್ದ ರಾಯಲ್ ಎನ್ಫೀಲ್ಡ್ ಈಗ ಮತ್ತೊಮ್ಮೆ ಬೆಲೆ ಹೆಚ್ಚಳಕ್ಕೆ ಮುಂದಾಗಿದೆ.

ರಾಯಲ್ ಎನ್ಫೀಲ್ಡ್ ತನ್ನ ಫೇಮಸ್ ಮಾಡೆಲ್ ಗಳಾದ ಕ್ಲಾಸಿಕ್ 350, ಮೆಟಿಯಾರ್ 350, ಇಂಟರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT650 ಬೈಕ್ ಗಳ ಬೆಲೆಯನ್ನ ಹೆಚ್ಚಿಸಿದೆ. ಕ್ಲಾಸಿಕ್ 350 ಹಾಗೂ ಮೆಟಿಯಾರ್ 350 ಗಳ ಎಲ್ಲಾ ವೇರಿಯಂಟ್ ಗಳ ಬೆಲೆಯಲ್ಲಿ 3300 ರೂ.ಗಳ ಹೆಚ್ಚಳವಾಗಿದೆ. ಇದೇ ಮೊದಲ ಬಾರಿಗೆ ಕ್ಲಾಸಿಕ್ 350 ಯ ರೆಡ್ಡಿಚ್ ವೇರಿಯಂಟ್ ನ ಬೆಲೆ ಏರಿಕೆಯಾಗಿದ್ದು ಇನ್ಮುಂದೆ 1.87 ಲಕ್ಷಕ್ಕೆ ದೊರೆಯಲಿವೆ.

ಮೆಟಿಯಾರ್ ನ ಬೆಲೆ ಸೆಪ್ಟೆಂಬರ್ ತಿಂಗಳಲ್ಲೂ ಏರಿಕೆಯಾಗಿತ್ತು ಈಗ ಮತ್ತೆ ಏರಿಕೆಯಾಗಿರುವುದರಿಂದ, ಮೆಟಿಯಾರ್ ನ ಸ್ಟಾರ್ಟಿಂಗ್ ಪ್ರೈಸ್ 2.01 ಲಕ್ಷಕ್ಕೆ ಜಿಗಿದಿದೆ.

ಇತ್ತ ಇಂಟರ್ ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT650 ಬೈಕ್ ಗಳ ಬೆಲೆ 4000 ರೂ. ದಿಂದ 5000 ರೂ. ಗಳಿಗೆ ಏರಿಕೆಯಾಗಿದೆ. ಈ ಮಾಡೆಲ್ ಗಳಲ್ಲಿ ಸಾಮಾನ್ಯವಾಗಿ ಬಣ್ಣಗಳ ಮೇಲೆಯೂ ಬೆಲೆ ಏರಿಕೆಯಾಗುತ್ತದೆ. ದರ ಹೆಚ್ಚಳದಿಂದ ರಾಯಲ್ ಎನ್ಫೀಲ್ಡ್ ಇಂಟರ್ಸೆಪ್ಟರ್ 650 ಯ ಸ್ಟಾರ್ಟಿಂಗ್ ಪ್ರೈಸ್ 2.85 ಲಕ್ಷಕ್ಕೆ ಏರಿಕೆಯಾಗಿದೆ. ಜೊತೆಗೆ ಕಾಂಟಿನೆಂಟಲ್ GT650ಯ ಬೆಲೆ 3.02ಲಕ್ಷಕ್ಕೇರಿದೆ. ರಾಯಲ್ ಎನ್ಫೀಲ್ಡ್ ದರ ಹೆಚ್ಚಳದ ಜೊತೆಗೆ ಬೈಕ್ ಗಳಲ್ಲಿ ಏನಾದರು ಬದಲಾವಣೆ ತರುತ್ತಿದೆಯಾ ಅಂದರೆ ಅದು ಇಲ್ಲ, ಯಾವುದೇ ಮೆಕ್ಯಾನಿಕಲ್ ಅಥವಾ ಕಾಸ್ಮೆಟಿಕ್ ಬದಲಾವಣೆಯಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...