alex Certify ಬೆಟ್ಟದಲ್ಲಿ ಜೊತೆಯಾಗಿದ್ದ ಯುವಕ, ಯುವತಿ ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿ ಸುಲಿಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಟ್ಟದಲ್ಲಿ ಜೊತೆಯಾಗಿದ್ದ ಯುವಕ, ಯುವತಿ ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿ ಸುಲಿಗೆ

ತುಮಕೂರು: ಕುಣಿಗಲ್ ತಾಲೂಕಿನ ಹುತ್ರಿದುರ್ಗ ಬೆಟ್ಟದಲ್ಲಿ ಚಾರಣಕ್ಕೆ ಬಂದ ಯುವಕ, ಯುವತಿಯನ್ನು ಬೆದರಿಸಿ ಬೆತ್ತಲೆಗೊಳಿಸಿ ಸುಲಿಗೆ ಮಾಡಲಾಗಿದೆ.

ಗುರುವಾರ ಬಿಸಿಲು ಬಸವಣ್ಣ ದೇವಾಲಯದ ಸಮೀಪ ಯುವಕ. ಯುವತಿಯನ್ನು ಬೆದರಿಸಿ ಬಟ್ಟೆ ಬಿಚ್ಚಿಸಿದ್ದ ಕಿಡಿಗೇಡಿಗಳು ನಗ್ನ ವಿಡಿಯೋ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಇಲ್ಲವೆಂದು ಹೇಳಿದಾಗ ಮೊಬೈಲ್ ಕಸಿದುಕೊಂಡು 30 ಸಾವಿರ ರೂಪಾಯಿ ಕೊಡದಿದ್ದರೆ ಜಾಲತಾಣದಲ್ಲಿ ಬೆತ್ತಲೆ ವಿಡಿಯೋ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದಾರೆ. ಈ ವಿಷಯ ತಿಳಿದು ಸ್ಥಳೀಯರು ಬರುತ್ತಿದ್ದಂತೆ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಕುಣಿಗಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಿಡಿಗೇಡಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಬುಧವಾರ ನಡೆದ ಘಟನೆಯಲ್ಲಿ ಚಾರಣಕ್ಕೆ ಬಂದಿದ್ದ ಯುವಕ ಮತ್ತು ಮಹಿಳೆಗೆ ಚಾಕು ತೋರಿಸಿ ಮೊಬೈಲ್ ಮತ್ತು ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮೊಬೈಲ್ ಬಳಸಿಕೊಂಡು ಕೆಂಪನಹಳ್ಳಿ ಪೆಟ್ರೋಲ್ ಬಂಕ್ ನಲ್ಲಿ ಫೋನ್ ಪೇ ಮೂಲಕ 13 ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...