alex Certify ಸಿಡಿ ಪ್ರಕರಣ: ಶಿಕ್ಷಕಿ, 4 ಟಿವಿ ವರದಿಗಾರರ ವಶಕ್ಕೆ ಪಡೆದು ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಡಿ ಪ್ರಕರಣ: ಶಿಕ್ಷಕಿ, 4 ಟಿವಿ ವರದಿಗಾರರ ವಶಕ್ಕೆ ಪಡೆದು ವಿಚಾರಣೆ

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್ಐಟಿ ಮೊದಲ ದಿನವೇ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದೆ.

ಖಾಸಗಿ ಸುದ್ದಿವಾಹಿನಿಗಳ ನಾಲ್ವರು ವರದಿಗಾರರು ಮತ್ತು ರಾಮನಗರದ ಶಿಕ್ಷಕಿಯೊಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಇನ್ನೂ ಮೂವರು ವರದಿಗಾರರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗಿದೆ.

ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ದೂರು ನೀಡುವ ಮೊದಲೇ ರಾಜ್ಯಮಟ್ಟದ ಮೂರು ಸುದ್ದಿವಾಹಿನಿಗಳ ನಾಲ್ವರು ವರದಿಗಾರರ ಬಳಿ ಸಿಡಿ ಇತ್ತು ಎನ್ನುವುದು ಗೊತ್ತಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ವ್ಯಕ್ತಿಯೊಬ್ಬನನ್ನು ಕೂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...