alex Certify ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಎಫ್‍ಸಿಐ ಮ್ಯಾನೇಜರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಎಫ್‍ಸಿಐ ಮ್ಯಾನೇಜರ್

ಚಂಡೀಗಢ: ಖಾಸಗಿ ಉದ್ಯಮಿಯೊಬ್ಬರಿಂದ ಅಕ್ಕಿಯ ಖರೀದಿಗಾಗಿ ಟೆಂಡರ್ ನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಡಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭಾರತೀಯ ಆಹಾರ ನಿಗಮದ (ಎಫ್‍ಸಿಐ) ವ್ಯವಸ್ಥಾಪಕರೊಬ್ಬರು ರೆಡ್ ಹ್ಯಾಂಡ್ ಆಗಿ ಸಿಬಿಐಗೆ ಸಿಕ್ಕಿಬಿದ್ದಿದ್ದಾರೆ.

ದಾರಿ ತಪ್ಪಿದ ಪ್ರೀತಿ, ಪರಪುರುಷನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ -ದುಡುಕಿದ ಪ್ರೇಮಿ

ಉದ್ಯಮಿ ರವೀಂದರ್ ಸಿಂಗ್‍ನಿಂದ ಮ್ಯಾನೇಜರ್ ಗಗನ್ ನೇಗಿ ಲಂಚ ಪಡೆಯುತ್ತಿದ್ದರು. ಇ-ಹರಾಜು ಮೂಲಕ ಅಕ್ಕಿ ಖರೀದಿ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲು ಲಂಚ ಪಡೆಯಲಾಗುತ್ತಿತ್ತು.

ಇಬ್ಬರು ಆರೋಪಿಗಳ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಸಿಬಿಐ ಪ್ರಕಟಣೆಯಲ್ಲಿ ತಿಳಿಸಿದೆ. ಲಂಚದ ಹಗರಣ ಸಂಬಂಧ ಅಮೃತಸರ, ಜಿರಾಕ್‍ಪುರ, ಚಂಡೀಗಢದಲ್ಲಿನ ಎಫ್‍ಸಿಐ ಗೋಡೌನ್‍ಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧಕಾರ್ಯ ಕೂಡ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...