alex Certify ಇದು ದೇಶದ ಮೊದಲ ಸೋಲಾರ್‌ ಗ್ರಾಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇದು ದೇಶದ ಮೊದಲ ಸೋಲಾರ್‌ ಗ್ರಾಮ

Residents of This MP Village Do Not Need Wood or LPG to Cook, How Solar Power Changed Lives

ದೇಶದ ಮೊದಲ ಸೋಲಾರ್‌ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು.

ಈ ಊರಿನಲ್ಲಿ 74 ಮನೆಗಳಿದ್ದು, ಪ್ರತಿಯೊಂದು ಮನೆಯೂ ಸೋಲಾರ್‌ ಫಲಕ, ಬ್ಯಾಟರಿ ಹಾಗೂ ಒಲೆಗಳನ್ನು ಹೊಂದಿದ್ದು, ಯಾವುದೇ ಮನೆಯಲ್ಲಿ ಅಡುಗೆ ಮಾಡಲು ಸೌದೆ/ಗ್ಯಾಸ್ ಒಲೆಗಳನ್ನು ಬಳಸುವುದಿಲ್ಲ.

ಐಐಟಿ-ಬಾಂಬೆ ಹಾಗೂ ಒಎನ್‌ಜಿಸಿ ಜಂಟಿ ಸಹಯೋಗದಲ್ಲಿ ವಿದ್ಯಾ ಭಾರತಿ ಸಂಸ್ಥೆಯು ಎರಡು ವರ್ಷಗಳ ಹಿಂದೆ ಈ ಕುಗ್ರಾಮಕ್ಕೆ ಭರ್ಜರಿ ಮಾರ್ಪಾಡು ಮಾಡಿದೆ. 2017ರಲ್ಲಿ ಈ ಊರನ್ನು ಸೋಲಾರ್‌ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದ ವಿದ್ಯಾ ಭಾರತಿ, 2019ರಲ್ಲಿ ಸಂಪೂರ್ಣ ಸೋಲಾರ್‌ ಗ್ರಾಮವನ್ನಾಗಿ ಬಚಾವನ್ನು ಬದಲಿಸಿದೆ.

ಇಂಗುಗುಂಡಿಗಳ ನಿರ್ಮಾಣದಿಂದಾಗಿ ಈ ಊರಿನಲ್ಲಿ ಬೇಸಿಗೆ ಕಾಲದಲ್ಲೂ ಸಹ ನೀರಿನ ಅಭಾವ ಇಲ್ಲದಂತಾಗಿದೆ. ಸಣ್ಣ ಪುಟ್ಟ ನದಿಗಳಿಗೆ ಪುಟ್ಟ ತಡೆಅಣೆಕಟ್ಟು ನಿರ್ಮಾಣದ ಮೂಲಕ ಕೃಷಿ ಚಟುವಟಿಕೆಗಳಿಗೆ ಸದಾ ನೀರು ಲಭ್ಯವಿರುವಂತೆ ನೋಡಿಕೊಂಡಿದ್ದಾರೆ ಗ್ರಾಮಸ್ಥರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...