alex Certify ಜೋಕಾಲಿಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಗೊಂಬೆ ಪ್ರತ್ಯಕ್ಷ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೋಕಾಲಿಯಲ್ಲಿ ಇದ್ದಕ್ಕಿದ್ದಂತೆ ವಿಚಿತ್ರ ಗೊಂಬೆ ಪ್ರತ್ಯಕ್ಷ…!

ಆಸ್ಟ್ರೇಲಿಯಾದ ಮ್ಯಾಂಗ್ರೋವ್​ ಕಾಡಿನಲ್ಲಿ ವಿಚಿತ್ರವಾದ ಗೊಂಬೆಯೊಂದು ಪತ್ತೆಯಾಗಿದ್ದು, ಇದನ್ನ ನೋಡಿದ ಸ್ಥಳೀಯ ನಿವಾಸಿಗಳು ಶಾಕ್​ ಆಗಿದ್ದಾರೆ.

ಉತ್ತರ ಕ್ವೀನ್ಸ್​ ಲ್ಯಾಂಡ್​​​ನಲ್ಲಿ ಕೇವಲ 406 ಮಂದಿ ಮಾತ್ರ ವಾಸವಿದ್ದಾರೆ. ಇವರಿಗೆಲ್ಲ ಈ ರೀತಿಯ ಗೊಂಬೆಗಳು ಹಾಗೂ ಅದರಿಂದಾಗುವ ಅಪಶಕುನಗಳ ಬಗ್ಗೆ ಮಾಹಿತಿ ಇದೆ. ಇವು ಮೀನುಗಾರಿಕೆ ವಿಫಲ ಮಾಡಿಸುತ್ತವೆ ಎಂಬ ನಂಬಿಕೆಯೂ ಸ್ಥಳೀಯರಲ್ಲಿದೆ. ಆದರೂ ಸಹ ಯಾರೊಬ್ಬರೂ ಈ ಗೊಂಬೆಯನ್ನ ಮುಟ್ಟೋದಕ್ಕಾಗಿ ಅಥವಾ ಅದರ ಬಗ್ಗೆ ವಿಚಾರಿಸುವ ಗೋಜಿಗಾಗಿ ಹೋಗಿಲ್ಲ.

ಇಲ್ಲಿರುವ ಎಲ್ಲರಿಗೂ ಗೊಂಬೆಯ ಬಗ್ಗೆ ತಿಳಿದಿದೆ ಎನಿಸುತ್ತೆ ಆದರೆ ಯಾರೂ ಅದರ ಬಗ್ಗೆ ಮಾತನಾಡಲು ಇಚ್ಚಿಸುತ್ತಿಲ್ಲ ಎಂದು ಸ್ಥಳೀಯ ಸಂಸದ ನಿಕ್​ ಡ್ಯಾಮೆಟ್ಟೋ ಹೇಳಿದ್ದಾರೆ.

ಗೊಂಬೆಯ ವಿಚಾರವಾಗಿ ತಿಳಿದಿರುವ ವಿಚಾರಗಳಿಗಿಂತ ಗೊಂದಲಗಳೇ ಹೆಚ್ಚಾಗಿದೆ. ಆದರೆ ಗೊಂಬೆಯನ್ನ ಈ ರೀತಿ ಜೋಕಾಲಿಯ ಮೇಲೆ ದಂಪತಿಯೊಬ್ಬರು ಕೂರಿಸಿದ್ದಾರೆ ಎಂದು ಉದ್ಯಮಿಯೊಬ್ಬರು ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...