alex Certify ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್…..! ದಶಕಗಳ ನಂತರ ಉತ್ಪಾದನೆ ಸ್ಥಗಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಟ ನಿಲ್ಲಿಸಿದ ರೆನಾಲ್ಟ್ ಡಸ್ಟರ್…..! ದಶಕಗಳ ನಂತರ ಉತ್ಪಾದನೆ ಸ್ಥಗಿತ

ಭಾರತದಲ್ಲಿ ರೆನಾಲ್ಟ್ ಒಂದು ಬ್ರ್ಯಾಂಡ್ ಆಗೋದಕ್ಕೆ ಡಸ್ಟರ್ ಎಸ್‌ಯುವಿ ಕಾರ್ ಮುಖ್ಯ ಕಾರಣ ಅಂದ್ರೆ ತಪ್ಪಾಗಲ್ಲ. ಅದು ಸೆಡಾನ್ ಕಾರುಗಳೆ ಟ್ರೆಂಡ್ ನಲ್ಲಿದ್ದ ಕಾಲ, ಅಂದ್ರೆ 2012. ಅಂತಾ ಸಂದರ್ಭದಲ್ಲಿ ಭಾರತೀಯ ಮಾರುಕಟ್ಟೆಗೆ ಡಸ್ಟರ್ ಕಾರನ್ನ ಪರಿಚಯಿಸಿ, ಪ್ರತಿಯೊಬ್ಬರು ಎಸ್‌ಯುವಿಯತ್ತ ತಿರುಗಿ ನೋಡುವಂತೆ ಮಾಡಿದ್ದ ರೆನಾಲ್ಟ್ ಈಗ ತನ್ನ ಲಕ್ಕಿ ಕಾರಿನ ಉತ್ಪಾದನೆಯನ್ನ ಸ್ಥಗಿತಗೊಳಿಸಿದೆ.

ಇದಕ್ಕೆ ಕಾರಣ ತಿಳಿದಿರುವುದೇ. ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಕಾಂಪಿಟೇಷನ್. ಹಾಗಂತ ರೆನಾಲ್ಟ್ ಏನು ಹಿಂದುಳಿದಿರಲಿಲ್ಲ, ಡಸ್ಟರ್ ಕಾರಿನ ಹಲವು ಅಪ್‌ಗ್ರೇಡ್‌ಗಳೊಂದಿಗೆ ಮಾರುಕಟ್ಟೆಗೆ ಬಂದರೂ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ರೆನಾಲ್ಟ್ ಡಸ್ಟರ್ ಕಾರಿನ ಉತ್ಪಾದನೆಯನ್ನು ಹಂತಹಂತವಾಗಿ ಕಡಿಮೆ ಮಾಡುತ್ತಾ ಈಗ, ಕೆಲವು ತಿಂಗಳ ಹಿಂದೆ ಸಂಪೂರ್ಣವಾಗಿ ನಿಲ್ಲಿಸಿದೆ.

BIG NEWS: ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು; ಪರಿಷತ್ ನಲ್ಲಿ ಗದ್ದಲ-ಕೋಲಾಹಲ

ಕಂಪನಿಯು ಡಸ್ಟರ್ ಬದಲು, ಹೊಸ-ಜನ್ SUV ಅಡಿಯಲ್ಲಿ ಕಂಬ್ಯಾಕ್ ಆಗಬಹುದು ಎಂದು ನಿರೀಕ್ಷಿಸಲಾಗಿದೆ.‌ ರೆನಾಲ್ಟ್ ಡಸ್ಟರ್ ಉತ್ಪಾದನೆ ಸ್ಥಗಿತಗೊಳಿಸುವವರೆಗೆ ಸುಮಾರು 2 ಲಕ್ಷ ಕಾರುಗಳನ್ನು ಇಲ್ಲಿ ಮಾರಾಟ ಮಾಡಿದೆ. ಕಂಪನಿಯು ಮಹೀಂದ್ರಾ ಸ್ಕಾರ್ಪಿಯೊಗೆ ಸವಾಲೆಸೆದು ಒಳ್ಳೆ ಪರ್ಫಾಮೆನ್ಸ್ ನೀಡಿತ್ತಾದರೂ, ಹ್ಯುಂಡೈ ಕ್ರೆಟಾದಂತಹ ಉತ್ಪನ್ನಗಳ ಪ್ರವೇಶವು ಕ್ರಮೇಣ ಡಸ್ಟರ್‌ನ ಮಾರುಕಟ್ಟೆ ಪಾಲನ್ನು ಕಬಳಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...