alex Certify ’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

’3 ಈಡಿಯಟ್ಸ್‌’ ದೃಶ್ಯದ ರಿಯಲ್ ವರ್ಶನ್ ಸೃಷ್ಟಿಸಿದ ಯುವಕರ ವಿಡಿಯೋ ವೈರಲ್

ರಾಜ್ಕುಮಾರ್‌ ಹಿರಾನಿರ ’3 ಇಡಿಯಟ್ಸ್’ ಚಿತ್ರ ದೇಶವಾಸಿಗಳಿಗೆ ಆಲ್‌ಟೈಮ್ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಒಂದಾಗಿದೆ.

ಆಮೀರ್‌ ಖಾನ್, ಆರ್‌ ಮಾಧವನ್, ಅರ್ಮಾನ್ ಜೋಶಿ ಹಾಗೂ ಕರೀನಾ ಕಪೂರ್‌ ಖಾನ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರದಲ್ಲಿನ ಅನೇಕ ದೃಶ್ಯಗಳು ಈಗಲೂ ಸಹ ಮೀಮರ್‌ಗಳಿಗೆ ಆಹರವಾಗಿವೆ.

ಚಿತ್ರದಲ್ಲಿ ಆಮೀರ್‌ ಖಾನ್ ಪಾತ್ರವಹಿಸಿರುವ ರಾಂಛೋ, ಸಹಪಾಠಿ ರಾಜುನ ತಂದೆಯನ್ನು ಆಸ್ಪತ್ರೆಗೆ ಚಿಕಿತ್ಸೆಗೆಂದು ಸ್ಕೂಟರ್‌ನಲ್ಲಿ ಕೊಂಡೊಯ್ಯವ ದೃಶ್ಯ ಇಂದಿಗೂ ಸಹ ಸಿನಿಪ್ರಿಯರಿಗೆ ನೆನಪಿದೆ.

ಇದೇ ದೃಶ್ಯವನ್ನು ನೆನೆಪಿಸುವಂತೆ ವೃದ್ಧರೊಬ್ಬರನ್ನು ತಮ್ಮ ನಡುವೆ ಕೂರಿಸಿಕೊಂಡ ಯುವಕರು ಸ್ಕೂಟರ್‌ನಲ್ಲಿ ತೆರಳುತ್ತಿರುವ ಘಟನೆಯೊಂದರ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

’3 ಈಡಿಯಟ್ಸ್‌’ನ ಈ ದೃಶ್ಯದ ಲೈವ್‌ ವರ್ಶನ್ ಕಂಡು ನೆಟ್ಟಿಗರು ಬಿದ್ದು ಬಿದ್ದು ನಕ್ಕಿದ್ದಾರೆ. ಈ ವಿಡಿಯೋ ಶೇರ್‌ ಮಾಡಿದ ಪೋಸ್ಟ್‌ಗೆ ತಮಾಷೆಭರಿತ ಕಾಮೆಂಟ್‌ಗಳ ಸುರಿಮಳೆಯೇ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...