alex Certify ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾತಕದಲ್ಲಿ ಈ ದೋಷ ಕಂಡು ಬಂದ್ರೆ ಪರಿಹಾರ ಕಷ್ಟ

 

ಜಾತಕದಲ್ಲಿ ದೋಷವಿದ್ದರೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಉದ್ಯೋಗ-ವ್ಯವಹಾರ ಸೇರಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತವೆ.

ಧಾರ್ಮಿಕ ಗ್ರಂಥಗಳ ಪ್ರಕಾರ, ವ್ಯಕ್ತಿಯ ಜಾತಕದಲ್ಲಿ ಅಶುಭ ಗ್ರಹವು ಶುಭ ಗ್ರಹದೊಂದಿಗೆ ಸಂಯೋಗಗೊಂಡಾಗ, ಜಾತಕದಲ್ಲಿ ದೋಷ ಉಂಟಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದ ಈ ದೋಷಗಳನ್ನು ಹೋಗಲಾಡಿಸಲು ಕೆಲವು ವಿಶೇಷ ಕ್ರಮಗಳನ್ನು ಪಾಲಿಸಬೇಕಾಗುತ್ತದೆ. ಆದ್ರೆ ಕೆಲವೊಂದು ದೋಷಗಳನ್ನು ಪರಿಹರಿಸುವುದು ಬಹಳ ಕಷ್ಟ.

ಪಿತೃ ದೋಷ: ಜಾತಕದಲ್ಲಿ ಪಿತೃ ದೋಷವಿದ್ದರೆ ಅದನ್ನು ಪರಿಹರಿಸಿಕೊಳ್ಳುವುದು ಕಷ್ಟ. ಪಿತೃ ದೋಷವಿದ್ರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ. ಮನೆಯಲ್ಲಿ ಸಮಸ್ಯೆ ಜಾಸ್ತಿಯಾಗುತ್ತದೆ. ಪಿತೃ ದೋಷ ಪರಿಹರಿಸಿಕೊಳ್ಳಲು ಪ್ರತಿದಿನ ಕಾಗೆಗಳು ಮತ್ತು ಪಕ್ಷಿಗಳಿಗೆ ಆಹಾರವನ್ನು ನೀಡಬೇಕು. ಅಮಾವಾಸ್ಯೆಯಂದು ಬಿಳಿ ಹಸುವಿಗೆ ಹಸಿರು ಹುಲ್ಲಿನ ಆಹಾರ ನೀಡಬೇಕು. ಪಿತೃ ದೋಷ ನಿವಾರಣಾ ಪೂಜೆಯನ್ನು ಕಲಿತ ಜ್ಯೋತಿಷಿಯಿಂದ ಪದ್ಧತಿಯಂತೆ ಅದನ್ನು ಮಾಡಿಸಬೇಕು. ಕಾಶಿ ಮತ್ತು ಗಯಾದಲ್ಲಿ ಅಗಲಿದ ಪೂರ್ವಜರಿಗೆ ತರ್ಪಣವನ್ನು ಅರ್ಪಿಸಬೇಕು.

ಮಂಗಳದೋಷ: ಯಾವುದೇ ದಂಪತಿ ಯಶಸ್ವಿ ದಾಂಪತ್ಯ ಜೀವನಕ್ಕಾಗಿ, ಅವರಿಬ್ಬರ ಜಾತಕದಲ್ಲಿ ಮಂಗಳದೋಷ ಇಲ್ಲದಿರುವುದು ಅವಶ್ಯಕ. ಒಬ್ಬರ ಜಾತಕದಲ್ಲಿ ಮಂಗಳದೋಷವಿದ್ದರೆ ಮದುವೆಯ ನಂತರ ಸಂಬಂಧದಲ್ಲಿ ದುಷ್ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಈ ದೋಷ ನಿವಾರಣೆಗೆ ಮಂಗಳವಾರದಂದು ದೇವಸ್ಥಾನದಲ್ಲಿ ದುರ್ಗೆಯನ್ನು ಪೂಜಿಸಬೇಕು. ಹನುಮಾನ್ ಚಾಲೀಸಾ ಓದಬೇಕು.

ಗುರು ಚಂಡಾಲ ದೋಷ : ಜಾತಕದಲ್ಲಿ ಈ ದೋಷವಿದ್ದರೆ ಜೀರ್ಣಾಂಗ ವ್ಯವಸ್ಥೆ, ಯಕೃತ್ತಿನ ಸಮಸ್ಯೆಗಳು ಮತ್ತು ಗಂಭೀರ ಕಾಯಿಲೆಗಳು ಕಾಡುತ್ತವೆ. ದುಂದುವೆಚ್ಚ ಹೆಚ್ಚಾಗುತ್ತದೆ. ಜಾತಕದಲ್ಲಿ ಗುರು ಮತ್ತು ರಾಹುಗಳ ಸಂಯೋಗದಿಂದ ಈ ದೋಷ ಕಾಣಿಸಿಕೊಳ್ಳುತ್ತದೆ. ಗುರುವಾರ ಹಸುಗಳು ಮತ್ತು ನಿರ್ಗತಿಕರಿಗೆ ಬೇಳೆ ಮತ್ತು ಬೆಲ್ಲವನ್ನು ದಾನ ಮಾಡಿದ್ರೆ ದೋಷ ಪರಿಹಾರವಾಗುತ್ತದೆ. ಪ್ರತಿ ಗುರುವಾರದಂದು  ವಿಷ್ಣುವನ್ನು ಆರಾಧಿಸಬೇಕು. ಗುರು ಗ್ರಹವನ್ನು ಪೂಜಿಸಬೇಕು. ಗಾಯತ್ರಿ ಮಂತ್ರವನ್ನು ಪಠಿಸಬೇಕು.

ಕಾಲ ಸರ್ಪ ದೋಷ : ಜಾತಕದಲ್ಲಿ ರಾಹು ಮತ್ತು ಕೇತು ಒಟ್ಟಿಗೆ ಬರುವುದರಿಂದ ಕಾಲ ಸರ್ಪ ದೋಷ ಉಂಟಾಗುತ್ತದೆ. ಈ ದೋಷವಿದ್ರೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಮಂಗಳವಾರ ಹಾವುಗಳಿಗೆ ಹಾಲು ನೀಡಿ ಪರಿಹಾರ ಕಂಡುಕೊಳ್ಳಬಹುದು. ದುರ್ಗಾ ಮಾತೆ ಮತ್ತು ಗಣೇಶನನ್ನು ಪೂಜಿಸಬೇಕು. ಮಂಗಳವಾರದಂದು ರಾಹು ಮತ್ತು ಕೇತುಗಳಿಗೆ ಅಗ್ನಿ ಆಚರಣೆಗಳನ್ನು ಮಾಡಬೇಕು. ಹನುಮಾನ್ ಚಾಲೀಸಾ ಓದಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...